ಮನೋರಂಜನೆ

ತನ್ನ ಸ್ಫೋಟಕ ಬ್ಯಾಟಿಂಗ್ ಹಿಂದಿನ ಸೀಕ್ರೆಟ್ ನ್ನು ಬಹಿರಂಗಪಡಿಸಿದ ವಿರಾಟ್ ಕೊಹ್ಲಿ !

Pinterest LinkedIn Tumblr

Virat-Kohli

ನವದೆಹಲಿ: ಐಪಿಎಲ್ ನಲ್ಲಿ ತನ್ನ ವಿರಾಟ ಪರ್ವ ತೋರಿಸಿದ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರು ತಾವು ಪ್ರತಿ ಪಂದ್ಯದಲ್ಲಿ ಅತ್ಯುತ್ತಮ ರನ್ ಗಳಿಸುವುದರ ಹಿಂದಿನ ಸೀಕ್ರೆಟ್ ಏನು ಎಂಬುದನ್ನು ಶುಕ್ರವಾರ ಬಹಿರಂಗಪಡಿಸಿದ್ದಾರೆ.

ತಮ್ಮ ಯಶಸ್ಸಿಗೆ ಕಾರಣವೇನು? ತಮ್ಮ ಮನಸ್ಸನ್ನು ಹೇಗೆ ಸುಸ್ಥಿತಿಯಲ್ಲಿಟ್ಟುಕೊಳ್ಳುತ್ತಾರೆ ಎಂಬುದನ್ನು ಪಿಟಿಐ ನೀಡಿದ ವಿಶೇಷ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಅವರು ಹೇಳಿಕೊಂಡಿದ್ದಾರೆ.

‘ಪ್ರತಿ ದಿನವೂ ನನಗೆ ಹೊಸದು. ಪ್ರತಿಯೊಂದು ಪಂದ್ಯದಲ್ಲಿ ಬೆಳೆಯಲು ಅವಕಾಶವಿರುತ್ತದೆ. ಒಳಿತನ್ನು ತೆಗೆದುಕೊಂಡು, ಬೇಡವಾದದನ್ನು ತಿದ್ದಿಕೊಳ್ಳಲು ಯತ್ನಿಸುತ್ತೇನೆ. ಕಠಿಣ ಶ್ರಮ ಮತ್ತು ಶಿಸ್ತಿನಲ್ಲಿ ಮಾತ್ರ ಯಾವುದೇ ಬದಲಾವಣೆ ಇಲ್ಲ’ ಎಂದು ಹೇಳಿದ್ದಾರೆ.

ಪ್ರತಿಯೊಬ್ಬ ಕ್ರಿಕೆಟಿಗ ಯಾವ ಶ್ರಮ ಹಾಕುತ್ತಾನೆಯೇ ಅದೇ ರೀತಿ ನಾನು ಶ್ರಮ ಹಾಕುತ್ತೇನೆ. ಆಡುತ್ತಿರುವ ಪ್ರದೇಶದ ಬಗ್ಗೆ ಅಭದ್ರತಾ ಭಾವ ಹೊಂದಿದ್ದರೆ, ತಪ್ಪು ಮಾಡ, ಹತಾಶರಾಗುತ್ತೀರಿ. ಉತ್ತಮ ಪ್ರದರ್ಶನ ನೀಡಬೇಕಾದರೆ ನಿಮ್ಮನ್ನು ನೀವು ನಿಯಂತ್ರಿಸುಕೊಳ್ಳುವ ಅಗತ್ಯ ಇಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ಕೊಹ್ಲಿ ಕ್ಯಾಪ್ಟನ್ ಆಗಿರುವ ರಾಯಲ್ ಚಾಲೆಂಜರ್ಸ್ ಐಪಿಎಲ್ ನಲ್ಲಿ ಅಂತಿಘಟ್ಟ ತಲುಪಿದೆ, ಈಗಾಗಲೇ ವೈಯಕ್ತಿಕವಾಗಿ ನಾಲ್ಕು ಶತಕ ಬಾರಿಸಿರುವ ಕೊಹ್ಲಿ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಗೌರವಕ್ಕೆ ಪಾತ್ರವಾಗಿದ್ದಾರೆ.

Comments are closed.