ರಾಷ್ಟ್ರೀಯ

‘ಶಿವಾಯ್‌’ ಪೋಸ್ಟರ್‌ ವಿರುದ್ದ ದೂರು : ಅಜಯ್‌ ದೇವ್‌ಗನ್‌ಗೆ ಸಂಕಷ್ಟ

Pinterest LinkedIn Tumblr

shivayಹೊಸದಿಲ್ಲಿ : ಬಾಲಿವುಡ್‌ನ‌ ಸೂಪರ್‌ ಸ್ಟಾರ್‌ ಅಜಯ್‌ ದೇವ್‌ಗನ್‌ ಅವರು ತಮ್ಮ ಮುಂಬರುವ ‘ಶಿವಾಯ್‌’ ಚಿತ್ರದ ಪೋಸ್ಟರನ್ನು ಪ್ರಕಟಿಸಿಕೊಂಡಿದ್ದರು.ಈಗ ಆ ಪೋಸ್ಟರ್‌ ವಿವಾದಕ್ಕೆ ಕಾರಣವಾಗಿದ್ದು ಅದರ ವಿರುದ್ದ ದೂರು ದಾಖಲಾಗಿದೆ.

ಎಎನ್‌ಐ ವರದಿಯ ಪ್ರಕಾರ ದೇವ್‌ಗನ್‌ ವಿರುದ್ದ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ದೆಹಲಿಯ ತಿಲಕ್‌ನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ.

ಪೋಸ್ಟರ್‌ನಲ್ಲಿ ನಾಯಕ ಅಜಯ್‌ ದೇವ್‌ಗನ್‌ ಅವರು ಶೂ ಧರಿಸಿ ಶಿವನ ಚಿತ್ರದ ಮೇಲೆ ಹತ್ತುತ್ತಿರುವು ವಿವಾದಕ್ಕೆ ಕಾರಣವಾಗಿದ್ದು, ಇದು ಶಿವನ ಭಕ್ತರು ಮತ್ತು ಹಿಂದೂಗಳ ಧಾರ್ಮಿಕ ಭಾವನೆಗೆ ನೋವು ತಂದಿದೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.

ಮೇ 22 ರಂದು ಬಿಡುಗಡೆದ ಮಾಡಿದ ಕೆಲ ಪೋಸ್ಟರ್‌ಗಳಲ್ಲಿ ಅಜಯ್‌ ದೇವ್‌ಗನ್‌ ಅವರು ಹಿಮದಿಂದ ಮಾಡಿದ ತ್ರಿಶೂಲ ಹಿಡಿದ ಪೋಸ್‌ನಲ್ಲಿ ಕಂಡು ಬಂದಿದ್ದಾರೆ.

ಭರ್ಜರಿ ಬಜೆಟ್‌ನ ಅದ್ದೂರಿ ಚಿತ್ರದ ಬಿಡುಗಡೆ ಗೆ ಅಕ್ಟೋಬರ್‌ 28 ರಂದು ದಿನಾಂಕ ನಿಗದಿಯೂ ಆಗಿದೆ.
-ಉದಯವಾಣಿ

Comments are closed.