ರಾಷ್ಟ್ರೀಯ

ತವರಿಗೆ ಹಿಂತಿರುಗಲು ಇಟಲಿ ನಾವಿಕನಿಗೆ ಸುಪ್ರೀಂ ಸಮ್ಮತಿ

Pinterest LinkedIn Tumblr

Itali

2012ರ ಕೇರಳದ ಮೀನುಗಾರರಿಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಟಲಿ ನಾವಿಕರಿಬ್ಬರ ಪೈಕಿ ಓರ್ವ ನಾವಿಕನಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದ್ದು, ‘ಮಾನವೀಯ ನೆಲೆಯಲ್ಲಿ ಜಾಮೀನು ಷರತ್ತನ್ನು ಸಡಿಲಗೊಳಿಸಿದ ಸುಪ್ರೀಂ ಕೋರ್ಟ್ ಆತನಿಗೆ ತನ್ನ ತವರಿಗೆ ಹೊರಡಲು ಗುರುವಾರ ಅನುಮತಿ ನೀಡಿದೆ.

ನ್ಯಾಯಮೂರ್ತಿಗಳಾದ ಪ್ರಫುಲ್ಲ ಸಿ. ಪಂತ್ ಮತ್ತು ಡಿವೈ ಚಂದ್ರಚೂಡ್ ಅವರಿದ್ದ ರಜಾ ಕಾಲೀನ ನ್ಯಾಯಪೀಠ, ಆರೋಪಿಯ ಜಾಮೀನು ನಿಯಮಾವಳಿಗಳನ್ನು ಸರಳಗೊಳಿಸಿ ಇಟಲಿಗೆ ತೆರಳಲು ಅವಕಾಶ ನೀಡಿದೆ.

ಇಟಲಿಯ ಸರಕಾರವೂ ಅಂತಾರಾಷ್ಟ್ರೀಯ ನ್ಯಾಯಮಂಡಳಿಯ ಈ ಸಂಬಂಧಿತ ತೀರ್ಪನ್ನು ಜಾರಿಗೆ ತರುವ ಮೂಲಕ ನೌಕಾಪಡೆ ಅಧಿಕಾರಿ ಇಟಲಿಗೆ ಮರಳುವಂತೆ ಜಾಮೀನು ಸಡಿಲಿಸಲು ಸುಪ್ರೀಂ ನ್ಯಾಯಾಲಯವನ್ನು ಕೋರಿತ್ತು.

2012ರಲ್ಲಿ ಕೇರಳ ಕರಾವಳಿಯಲ್ಲಿ ಇಟಲಿಯ ನೌಕಾ ಪಡೆಯ ಚೀಫ್ ಮಾಸ್ಟರ್ ಸಾರ್ಜಂಟ್ ಮಸ್ಸಿಮಿಲೀಯಾನೆ ಲೊಟಾರೆ ಮತ್ತು ಸಾರ್ಜೆಂಟ್ ಮೇಜರ್ ಗಿರೋನೆ ಇಬ್ಬರು ಭಾರತೀಯ ಮೀನುಗಾರರನ್ನು ತಪ್ಪಾಗಿ ಕಡಲ್ಗಳ್ಳರೆಂದು ಭಾವಿಸಿ ಗುಂಡಿಟ್ಟು ಕೊಂದಿದ್ದರು. ಲೊಟಾರೆ ಆರೋಗ್ಯ ಕಾರಣ ನ್ಯಾಯಾಲಯದಿಂದ ವಿನಾಯಿತಿ ಪಡೆದು ಈಗಾಗಲೇ ಇಟಲಿಯಲ್ಲಿದ್ದಾರೆ.

Comments are closed.