ಅಂತರಾಷ್ಟ್ರೀಯ

ಬಂಡವಾಳ ಹೂಡಲು ಚೀನಾಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕರೆ

Pinterest LinkedIn Tumblr

pranavದ್ವಿಪಕ್ಷೀಯ ವ್ಯಾಪಾರ- ವಹಿವಾಟುಗಳನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ಮೇಕ್-ಇನ್-ಇಂಡಿಯಾ ಮತ್ತಿತರ ಅಭಿವೃದ್ಧಿ ಕಾರ್ಯಗಳಲ್ಲಿ ಕೈ ಜೋಡಿಸಿ ಬಂಡವಾಳ ಹೂಡಿಕೆ ಮಾಡುವಂತೆ ಚೀನಾವನ್ನು ಒತ್ತಾಯಿಸಿರುವ ಭಾರತ ಹೂಡಿಕೆದಾರರಿಗೆ ಸಕಲ ನೆರವು ಮತ್ತು ರಕ್ಷಣೆ ಒದಗಿಸುವುದಾಗಿ ಭರವಸೆ ನೀಡಿದೆ. ನಾಲ್ಕು ದಿನಗಳ ಭೇಟಿಗೆಂದು ಚೀನಾಕ್ಕೆ ಆಗಮಿಸಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇಂದಿಲ್ಲಿ ಆಯೋಜಿಸಿದ್ದ ಭಾರತ-ಚೀನಾ ಔದ್ಯಮಿಕ ವೇದಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನೀವು ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವುದಾದರೆ ನಾವು ನಿಮಗೆ ಅಗತ್ಯವಾದ ಎಲ್ಲ ನೆರವುಗಳನನ್ನೂ ನೀಡಲು ಬದ್ಧರಾಗಿದ್ದೇವೆ ಎಂದರು.

ಇದರಿಂದ ಉಭಯ ರಾಷ್ಟ್ರಗಳ ಆರ್ಥಿಕಾಭಿವೃದ್ಧಿ ವೇಗ ಪಡೆದುಕೊಳ್ಳಲಿದೆ ಎಂದು ಪ್ರಣಬ್ ಹೇಳಿದ್ದಾರೆ. ಉಭಯ ರಾಷ್ಟ್ರಗಳ ದೊಡ್ಡ ದೊಡ್ಡ ಉದ್ಯಮಿಗಳು ಭಾಗವಹಿಸಿದ ಕಾರ್ಯಕ್ರಮದಲ್ಲಿ ಅನೇಕ ಕಂಪೆನಿಗಳ ಅಧಿಕಾರಿಗಳೂ ಹಾಜರಿದ್ದರು. ಈಗಾಗಲೇ ಭಾರತವು ಚೀನಾದ ಬಗ್ಗೆ ಹೆಚ್ಚಿನ ಒಲವು ಹೋದಿದೆ. ಭಾರತದಲ್ಲಿ ಮಾರುಕಟ್ಟೆಗೆ ಚೀನಾ ಉತ್ಪನ್ನಗಳು ಬರುತ್ತಿವೆ. ಅದೇ ರೀತಿ ಚೀನಾದ ಮಾರುಕ್ಟಟೆಗೆ ಭಾರತದ ಉತ್ಪನ್ನಗಳೂ ಹೆಚ್ಚಿನ ಪ್ರಮಾಣದಲ್ಲಿ ಬಂದರೆ ಎರಡೂ ರಾಷ್ಟ್ರಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ಅನುಕೂಲವಾಗುತ್ತದೆ. ವಿಶೇಷವಾಗಿ ಭಾರತವನ್ನು ಚೀನಾ ಎರಡೂ ರಾಷ್ಟ್ರಗಳ ನಡುವೆ ಹೆಚ್ಚು ಸಾಮ್ಯವಿರುವ ಔಷಧ ಮತ್ತು ವೈದ್ಯಕೀಯ ಉಪಕರಣಗಳು, ಮಾಹಿತಿ-ತಂತ್ರಜ್ಞಾನ ಮತ್ತು ಮಾಹಿತ ತಂತ್ರಜ್ಞಾನ ಸಂಬಂಧಿ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಉಭಯ ದೇಶಗಳು ಪರಸ್ಪರ ಕೈ ಜೋಡಿಸುವಂತಾಗಬೇಕು ಎಂದು ರಾಷ್ಟ್ರಪತಿ ಕರೆ ನೀಡಿದರು.

ಇಂತಹ ಒಪ್ಪಂದಗಳು ಎರಡೂ ದೃಷ್ಟಿ ಯಿಂದ ಭಾರತ ಮತ್ತು ಚೀನಾ ಎರಡಕ್ಕೂ ಹೆಚ್ಚು ಅನುಕೂಲವಾಗಲಿವೆಂದು ಅವರು ತಿಳಿಸಿದರು. ಈ ಶತಮಾನದ ಆರಂಭದಿಂದ ಎರಡೂ ದೇಶಗಳ ನಡುವಿನ ವ್ಯಾಪಾರ ವಹಿವಾಟು ಗಣನೀಯವಾಗಿ ಏರುತ್ತಿದ್ದು, 2000ದ ಸಾಲಿನಲ್ಲಿ 2.91 ಶತಕೋಟಿ (ಬಿಲಿಯನ್) ಡಾಲರ್‌ನಷ್ಟಿದ್ದದ್ದು ಪ್ರಸ್ತುತ ಕಳೆದ ವರ್ಷಕ್ಕೆ ಅದು 71 ಬಿಲಿಯನ್ (ಶತಕೋಟಿ) ಡಾಲರ್‌ಗಳಿಗೆ ಏರಿದೆ ಎಂದು ಅವರು ಹೇಳಿದರು.

Comments are closed.