ಕರ್ನಾಟಕ

’ಕಲಿ” ಚಿತ್ರ ನಿರ್ಮಾಣ ಸ್ಥಗಿತ ಬರಿ ವದಂತಿ ಎಂದ ಪ್ರೇಮ್

Pinterest LinkedIn Tumblr

Prem1clrಬೆಂಗಳೂರು,ಮೇ.೨೫-ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಸುದೀಪ್ ಜೋಡಿಯ ೧೦೦ ಕೋಟಿ ರೂಪಾಯಿ ವೆಚ್ಚದ “ಕಲಿ” ಚಿತ್ರ ನಿಂತು ಹೋಗಿದೆ.
ಚಿತ್ರೀಕರಣ ವಿಳಂಬವಾದ ಹಿನ್ನೆಲೆಯಲ್ಲಿ ನಿರ್ಮಾಪಕರು ಚಿತ್ರ ನಿರ್ಮಾಣದಿಂದ ಹಿಂದೆ ಸರಿದಿದ್ದಾರೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬಂದಿದೆ.
ಈ ಕುರಿತು ವಿವರ ನೀಡಿದ ನಿರ್ದೇಶಕ ಪ್ರೇಮ್ “ಕಲಿ” ನನ್ನ ಬಹುದಿನದ ಕನಸು. ಚಿತ್ರ ಆರಂಭವಾಗುವುದು ತಡವಾಗಿದೆ ಅಷ್ಟೇ. ಯಾವುದೇ ಕಾರಣಕ್ಕೂ ನಿಂತು ಹೋಗಿಲ್ಲ. ಮೊನ್ನೆ ತಾನೆ ನಿರ್ಮಾಪಕ ಜೊತೆ ಮಾತನಾಡಿದ್ದೇನೆ. ಅವರೂ ಶೀಘ್ರ ಚಿತ್ರೀಕರಣ ಕೈಗೆತ್ತಿಕೊಳ್ಳೋಣ ಎಂದು ಹೇಳಿದ್ದಾರೆ. ಹೀಗಿರುವಾಗ ಚಿತ್ರ ನಿಂತು ಹೋಗಿದೆ ಎಂದು ಕೆಲವರು ಹಬ್ಬಿಸುತ್ತಿರುವ ವದಂತಿ ಎಂದು ಹೇಳಿದ್ದಾರೆ.
೧೦೦ ಕೋಟಿ ರೂಪಾಯಿ
ಯಲ್ಲಿ ಬಹುಭಾಷೆಯಲ್ಲಿ ತಯಾರಾಗುತ್ತಿರುವ ಚಿತ್ರ ಇದು.
ಇದಕ್ಕಾಗಿ ಸಿದ್ದತೆಯೂ ನಡೆದಿದೆ, ಚಿತ್ರೀಕರಣ ನಿಂತಿರುವುದೆಲ್ಲಾ ಬರೀ ವದಂತಿ ಇವುಗಳ ಬಗ್ಗೆ ಶಿವರಾಜ್‌ಕುಮಾರ್ ಹಾಗು ಸುದೀಪ್ ಅಭಿಮಾನಿಗಳು ಕಿವಿಗೊಡಬಾರದು ಎಂದಿದ್ದಾರೆ.

Comments are closed.