ರಾಷ್ಟ್ರೀಯ

ಬಿಹಾರದಲ್ಲಿ ಎಲ್‌ಜೆಪಿ ನಾಯಕ ಸುದೇಶ್ ಪಾಸ್ವಾನ್ ಹತ್ಯೆ

Pinterest LinkedIn Tumblr

crime_rep

ಬಿಹಾರ: ಇಲ್ಲಿನ ದುಮಾರಿಯಾದಲ್ಲಿ ಎಲ್‌ಜೆಪಿ ನಾಯಕ ಸುದೇಶ್ ಪಾಸ್ವಾನ್ ಹತ್ಯೆಗೊಳಗಾಗಿದ್ದಾರೆ.
ಕಳೆದ ಫೆಬ್ರವರಿ ತಿಂಗಳಲ್ಲಿ ಎಲ್‌ಜೆಪಿ ನಾಯಕ ಬೈಜ್‌ನಾಥಿ ಸಿಂಗ್ ಅವರ ಹತ್ಯೆಯಾಗಿತ್ತು.
ಕೆಲವು ವಾರಗಳ ಹಿಂದೆಯಷ್ಟೇ ಜೆಡಿಯು ಎಂಎಲ್‌ಸಿ ಮಗ ರಾಕಿ ಯಾದವ್‌ನ ಕಾರನ್ನು ಓವರ್‌ಟೇಕ್ ಮಾಡಿದ್ದಕ್ಕೆ ಉದ್ಯಮಿಯೊಬ್ಬರ ಮಗನನ್ನು ಹತ್ಯೆ ಮಾಡಿದ ಸುದ್ದಿಯ ಬಿಸಿ ಆರುವ ಮುನ್ನವೇ ಈಗ ರಾಜಕಾರಣಿಯೊಬ್ಬರ ಹತ್ಯೆ ನಡೆದಿದೆ.
ಮೇ 13 ರಂದು ಪತ್ರಕರ್ತನೊಬ್ಬನ್ನು ಆಗಂತುಕರು ಗುಂಡಿಕ್ಕಿ ಸಾಯಿಸಿದ್ದರು. ಹೀಗೆ ಬಿಹಾರದಲ್ಲಿ ಒಂದರ ಹಿಂದೆ ಒಂದು ಎಂಬಂತೆ ಹತ್ಯೆಗಳು ನಡೆದು ಬರುತ್ತಿದ್ದು, ಜಂಗಲ್ ರಾಜ್ ಮರುಕಳಿಸಿದೆ ಎಂದು ವಿಪಕ್ಷಗಳು ನಿತೀಶ್ ಕುಮಾರ್ ಸರ್ಕಾರವನ್ನು ಟೀಕಿಸಿವೆ.

Comments are closed.