ರಾಷ್ಟ್ರೀಯ

ಮೋದಿಯ ಆಡಳಿತ ದೇಶದ 2/3 ರಷ್ಟು ಜನರಿಗೆ ತೃಪ್ತಿ ತಂದಿದೆ: ಸಮೀಕ್ಷೆ ಅಭಿಪ್ರಾಯ

Pinterest LinkedIn Tumblr

Narendra-Modi

ನವದೆಹಲಿ: ದೇಶದ ಎರಡನೇ ಮೂರರಷ್ಟು ಜನ ಎರಡು ವರ್ಷದ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಕೆಲಸಗಳಿಂದ ತೃಪ್ತರಾಗಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಸುಮಾರು 20 ಸ್ಥಳಗಳಲ್ಲಿ 15 ಸಾವಿರ ಸ್ಥಳೀಯರಿಗೆ ಕೇಳಿದ ಪ್ರಶ್ನೆಗಳಿಂದ ಈ ಮಾಹಿತಿ ತಿಳಿದು ಬಂದಿದೆ. ತಾವು ನಿರೀಕ್ಷಿಸಿದಷ್ಟು ಸರ್ಕಾರ ಸಾಧನೆ ಮಾಡಿದೆ ಎಂದು ಶೇ.64 ರಷ್ಟು ಜನ ಹೇಳಿದರೇ. ಶೇ. 36 ರಷ್ಟು ಮಂದಿ ತಮ್ಮ ನಿರೀಕ್ಷೆಗೆ ತಕ್ಕ ಹಾಗೆ ಮೋದಿ ಸರ್ಕಾರ ಕೆಲಸ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಮಹಿಳೆ ಮತ್ತು ಮಕ್ಕಳ ಸುರಕ್ಷತೆ, ಬೆಲೆ ಏರಿಕೆ ತಡೆಗಟ್ಟುವುದು ಸೇರಿದಂತೆ ಪ್ರಮುಖ ಕೆಲಸಗಳಲ್ಲಿ ಇನ್ನು ಹೆಚ್ಚಿನ ಪ್ರಯತ್ನ ಹಾಕಿ ಹೆಚ್ಚಿನ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಶೇ.76 ರಷ್ಟು ಜನ ಎನ್ ಡಿಎ ಸರ್ಕಾರದ ಸ್ವಚ್ಚ ಭಾರತ ಅಭಿಯಾನ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಗಳನ್ನು ಒಪ್ಪಿಕೊಂಡಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಸರ್ಕಾರ ಹೆಚ್ಚೆಚ್ಚು ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಿ , ಹೆಚ್ಚಿನ ಉದ್ಯೋಗವಕಾಶಗಳನ್ನು ಸೃಷ್ಟಿಸಬೇಕೆಂಬುದು ಹಲವರ ಅಭಿಪ್ರಾಯವಾಗಿದೆ.

ಶೇ.61 ರಷ್ಟು ಜನ ಜಿಎಸ್ ಟಿ ಮಸೂದೆ ಮೇಲೆ ನಂಬಿಕೆ ಇಟ್ಟಿದ್ದಾರೆ. ಶೇ. 20 ರಷ್ಟು ಜನ ಮೂಲಭೂತ ಸೌಕರ್ಯಗಳು ಅಭಿವೃದ್ಧಿಯಾಗಿಲ್ಲ ಎಂದು ಹೇಳಿದ್ದಾರೆಂದು ಸಮೀಕ್ಷೆ ತಿಳಿಸಿದೆ.

Comments are closed.