ರಾಷ್ಟ್ರೀಯ

ದೇಣಿಗೆ ಸಂಗ್ರಹದಲ್ಲಿ ಎಸ್​ಪಿ, ಎಎಪಿ ಮುಂಚೂಣಿ, ನೂತನ ಸಮೀಕ್ಷೆ

Pinterest LinkedIn Tumblr

aap-web-

ನವದೆಹಲಿ: 2004ರಿಂದ 2015ರ ಅವಧಿಯಲ್ಲಿ ದೇಣಿಗೆ ಸಂಗ್ರಹಿಸಿದ ಪಕ್ಷಗಳ ಸಾಲಿನಲ್ಲಿ ಸಮಾಜವಾದಿ ಪಕ್ಷ 186.8 ಕೋಟಿ ರೂ. ಸಂಗ್ರಹಿಸುವ ಮೂಲಕ ಪ್ರಥಮ ಸ್ಥಾನದಲ್ಲಿದ್ದರೆ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ದ್ವಿತೀಯ ಸ್ಥಾನದಲ್ಲಿದೆ. ಇದು ಸಮೀಕ್ಷೆಯೊಂದರಲ್ಲಿ ಬಹಿರಂಗವಾಗಿದೆ.

ಪ್ರಾದೇಶಿಕ ಪಕ್ಷಗಳಾಗಿ ನೆಲೆಯೂರಿರುವ ಸಮಾಜವಾದಿ ಪಕ್ಷ 186.6 ಕೋಟಿ ರೂ. ಸಂಗ್ರಹಿಸಿದ ದೇಣಿಗೆಯಲ್ಲಿ ಕೇವಲ 96.54 ಕೋಟಿ ರೂ.ಗಳನ್ನು ಮಾತ್ರ ಖರ್ಚು ಮಾಡಿದೆ. ಇನ್ನು ಆಮ್ ಆದ್ಮಿ ಪಕ್ಷ ಸಂಗ್ರಹಿಸಿದ 38.54 ಕೋಟಿ ರೂಗಳಲ್ಲಿ 22.66 ಕೋಟಿ ರೂ. ಹಣವನ್ನಷ್ಟೇ ಖರ್ಚು ಮಾಡುವ ಮೂಲಕ ಅತೀ ಹೆಚ್ಚು ದೇಣಿಗೆ ಸಂಗ್ರಹಿಸಿದ ಪಕ್ಷಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಎಡಿಆರ್ ತನ್ನ ವರದಿಯಲ್ಲಿ ತಿಳಿಸಿದೆ. ಹನ್ನೊಂದು ವರ್ಷದ ಅವಧಿಯಲ್ಲಿ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳು ಒಟ್ಟು 2,100 ಕೋಟಿ ರೂ. ಸಂಗ್ರಹಿಸಿವೆ. ಇದರಲ್ಲಿ ಶೇಕಡಾ 44ರಷ್ಟು ನಗದು ಹಣ ಸೇರಿದೆ.

ಈ ಸಂದರ್ಭದಲ್ಲಿ ಅಂದರೆ, 2004, 2009 ಹಾಗೂ 2015ರಲ್ಲಿ ಲೋಕಸಭಾ ಚುನಾವಣೆಗಳು ನಡೆದಿದ್ದು, ಈ ಚುನಾವಣೆಗಾಗಿ 1,300 ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಈ ರೀತಿ ದೇಣಿಗೆ ಎತ್ತಿದವರಲ್ಲಿ ಪ್ರಾದೇಶಿಕ ಪಕ್ಷಗಳೇ ಮೇಲುಗೈ ಸಾಧಿಸಿರುವುದು ಗಮನಾರ್ಹ ಅಂಶವಾಗಿದೆ. ಎಸ್ಪಿ, ಎಎಪಿ, ಎಐಡಿಎಂಕೆ, ಬಿಜೆಡಿ, ಎಸ್ಎಡಿ ಪಾಲು ಬರೋಬ್ಬರಿ 214. 14 ಕೋಟಿ ರೂ. ಆಗಿದೆ.

Comments are closed.