ರಾಷ್ಟ್ರೀಯ

ಉತ್ತರ ಪ್ರದೇಶದಲ್ಲೀಗ ಕೈ ಕಾರ್ಯಕರ್ತರಿಂದ ರಿಷಿ ಕಪೂರ್‌ ಟಾಯ್ಲೆಟ್!

Pinterest LinkedIn Tumblr

Rishi Kapoor-700ಅಲಹಾಬಾದ್‌ : ಕೆಲ ದಿನಗಳ ಹಿಂದೆ ಬಾಲಿವುಡ್‌ ನಟ ರಿಷಿಕಪೂರ್‌, ಕಾಂಗ್ರೆಸ್‌ ಪಕ್ಷ ತನ್ನ ಅಪ್ಪನ ಆಸ್ತಿಯಂತೆ ದೇಶದ ಸೊತ್ತುಗಳಿಗೆ ಗಾಂಧಿ ಕುಟುಂಬದವರ ಹೆಸರು ಇಟ್ಟಿರುವುದನ್ನು ಉಗ್ರವಾಗಿ ಟೀಕಿಸಿ ಸರಣಿ ಟ್ವೀಟ್‌ ಮಾಡಿದ್ದರು.

ಇದಕ್ಕೆ ಪ್ರತೀಕಾರವಾಗಿ ಉತ್ತರ ಪ್ರದೇಶದ ಕಾಂಗ್ರೆಸ್‌ ಕಾರ್ಯಕರ್ತರು ಇದೀಗ ಅಲಹಾಬಾದ್‌ನ ಸುಲಭ್‌ ಶೌಚಾಲಯವೊಂದರ ಮುಂದೆ ರಿಷಿಕಪೂರ್‌ ಹೆಸರಿನ ದೊಡ್ಡ ಫ‌ಲಕವೊಂದನ್ನು ತೂಗು ಹಾಕುವ ಮೂಲಕ ಆದಕ್ಕೆ “ರಿಷಿಕಪೂರ್‌ ಟಾಯ್‌ಲೆಟ್‌’ ಎಂದು ಹೆಸರಿಟ್ಟಿದ್ದಾರೆ.

ಪ್ರದೇಶ್‌ 18 ಸುದ್ದಿ ವಾಹಿನಿ ಮಾಡಿರುವ ವರದಿಯ ಪ್ರಕಾರ ಕಾಂಗ್ರೆಸ್‌ ಕಾರ್ಯಕರ್ತರು ಇಂದು ಉತ್ತರ ಪ್ರದೇಶದ ಅಲಹಾಬಾದ್‌ನ ಶಿವಾಜಿ ಪಾರ್ಕ್‌ ಪ್ರದೇಶದಲ್ಲಿ ಜಮಾಯಿಸಿ ಅಲ್ಲಿನ ಸುಲಭ್‌ ಶೌಚಾಲಯಕ್ಕೆ “ರಿಷಿಕಪೂರ್‌ ಟಾಯ್‌ಲೆಟ್‌’ ಎಂಬ ಫ‌ಲಕವನ್ನು ತೂಗು ಹಾಕಿದ್ದಾರೆ.

ಕಳೆದ ಮೇ 17ರಂದು ಬಾಲಿವುಡ್‌ ನಟ ರಿಷಿಕಪೂರ್‌ ಅವರು ಸರಣಿ ಟ್ವೀಟ್‌ ಮೂಲಕ ದೇಶದ ಪ್ರತಿಷ್ಠೆಯ ಆಸ್ತಿಪಾಸ್ತಿಗಳಿಗೆ ಗಾಂಧಿ ಕುಟುಂಬದವರು ತಮ್ಮ ಅಪ್ಪನ ಆಸ್ತಿ ಎಂಬ ರೀತಿಯಲ್ಲಿ ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿ ಅವರ ಹೆಸರನ್ನು ಇಟ್ಟಿರುವುದನ್ನು ತೀವ್ರವಾಗಿ ಟೀಕಿಸಿದ್ದರು.

“ಕಾಂಗ್ರೆಸ್‌ ಪಕ್ಷ ಗಾಂಧಿ ಕುಟುಂಬದವರ ಹೆಸರಿರಿಸಿರುವ ದೇಶದ ಸೊತ್ತುಗಳ ಹೆಸರನ್ನು ಬದಲಾಯಿಸಿ; ಬಾಂದ್ರಾ ವರ್ಲಿ ಸೀ ಲಿಂಗ್‌ಗೆ ಲತಾ ಮಂಗೇಶ್ಕರ್‌ ಅಥವಾ ಜೆಆರ್‌ಡಿ ಟಾಟಾ ಲಿಂಕ್‌ ರೋಡ್‌ ಎಂದು ಹೆಸರಿಡಿ’ ಎಂದು ಆಗ್ರಹಿಸಿದ್ದರು.
-ಉದಯವಾಣಿ

Comments are closed.