ರಾಷ್ಟ್ರೀಯ

ಅಲ್ಪ ಅಂತರದಲ್ಲಿ ಅಧಿಕಾರ ತಪ್ಪಿತು, ಡಿಎಂಕೆ ಧುರೀಣ ಕರುಣಾನಿಧಿ

Pinterest LinkedIn Tumblr

22-Karunanidhi-web

ಚೆನ್ನೈ: ತಮಿಳುನಾಡಿನಲ್ಲಿ ಎಐಎಡಿಎಂಕೆ ಅಧಿಕಾರ ಉಳಿಸಿಕೊಂಡಿರುವುದು ಕೇವಲ 1.1 ಶೇಕಡಾ ಮತಗಳ ಅಂತರದಲ್ಲಿ ಮತ್ತು ಅತ್ಯಂತ ಕಡಿಮೆ ಅಂತರದಲ್ಲಿ ತಮ್ಮ ಪಕ್ಷ ಸ್ಪಷ್ಟ ಬಹುಮತ ಪಡೆಯುವಲ್ಲಿ ಸೋತಿತು ಎಂದು ಚುನಾವಣಾ ಅಂಕಿ ಅಂಶಗಳನ್ನು ಉಲ್ಲೇಖಿಸುತ್ತಾ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರು ಭಾನುವಾರ ಇಲ್ಲಿ ಪ್ರತಿಪಾದಿಸಿದರು.

ತಮ್ಮ ಪಕ್ಷವು ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುವುದು ಎಂದು ಅವರು ನುಡಿದರು. ಎಐಎಡಿಎಂಕೆ, ಡಿಎಂಕೆ ಮತ್ತು ಅಂಗ ಪಕ್ಷಗಳು ಗಳಿಸಿದ ಒಟ್ಟು ಮತಗಳನ್ನು ಉಲ್ಲೇಖಿಸಿದ ಕರುಣಾನಿಧಿ, ಆಳುವ ಪಕ್ಷಕ್ಕೆ ಲಭಿಸಿರುವ ಹೆಚ್ಚು ಮತಗಳ ಸಂಖ್ಯೆ ನಮ್ಮ ಪಕ್ಷಕ್ಕಿಂತ 4,41,646 ರಷ್ಟು ಮಾತ್ರ ಎಂದು ಅವರು ಹೇಳಿದರು.

ಚುನಾವಣಾ ಅಂಕಿಸಂಖ್ಯೆಗಳನ್ನು ನೀಡಿದ ಡಿಎಂಕೆ ನಾಯಕ, ಎಐಎಡಿಎಂಕೆ ಮತ್ತು ಮಿತ್ರಪಕ್ಷಗಳು 1,76,17,060 ಮತಗಳನ್ನು ಗಳಿಸಿದರೆ, ಡಿಎಂಕೆ ಮತ್ತು ಮಿತ್ರಪಕ್ಷಗಳು 1,71,75,374 ಮತಗಳನ್ನು ಪಡೆದಿವೆ. ಅಂದರೆ ಎಐಎಡಿಎಂಕೆಯು ಸರ್ಕಾರ ರಚಿಸುವ ಅವಕಾಶವನ್ನು ಪಡೆದುಕೊಂಡದ್ದು ಕೇವಲ ಶೇಕಡಾ 1.1ರಷ್ಟು ಅಲ್ಪ ಅಂತರದಲ್ಲಿ. ಇದು ಸತ್ಯ’ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದರು.

Comments are closed.