ರಾಷ್ಟ್ರೀಯ

ರೂಪಾ ಗಂಗೂಲಿ ಮೇಲೆ ಟಿಎಂಸಿ ಕಾರ್ಯಕರ್ತರ ಹಲ್ಲೆ, ತಲೆಗೆ ಏಟು

Pinterest LinkedIn Tumblr

22-roopa-ganguly-webಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ವಿರೋಧಿ ರಾಜಕಾರಣಿಗಳ ಮೇಲಿನ ಮುಂದುವರಿದ ದಾಳಿಯಲ್ಲಿ ಭಾನುವಾರ ನಟಿ ಹಾಗೂ ಬಿಜೆಪಿ ನಾಯಕಿ ರೂಪಾ ಗಂಗೂಲಿ ಅವರ ವಾಹನದ ಮೇಲೆ ಕೋಲ್ಕತ ಸಮೀಪದ ಡೈಮಂಡ್ ಹಾರ್ಬರ್ ಬಳಿ ದಾಳಿ ಹಲ್ಲೆ ನಡೆದಿದ್ದು, ಗಂಗೂಲಿ ಅವರ ತಲೆಗೆ ಏಟು ಬಿದ್ದಿದೆ.

ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿಂದ ಈ ಹಲ್ಲೆ ನಡೆದಿದೆ ಎಂದು ಆಪಾದಿಸಲಾಗಿದೆ. ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ರೂಪಾ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪಕ್ಷ ಮೂಲಗಳು ಹೇಳಿವೆ. ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರೂಪಾ ಪರಾಭವಗೊಂಡಿದ್ದರು.

ರೂಪಾ ಗಂಗೂಲಿ ಅವರು 24 ಪರಗಣ ಜಿಲ್ಲೆಯ ಕೊಕ್ಡದ್ವೀಪದಿಂದ ವಾಪಾಸಾಗುತ್ತಿದ್ದಾಗ ಈ ಹಲ್ಲೆ ನಡೆದಿದೆ. ರೂಪಾ ಅವರು ರಾಜಕೀಯ ದಾಳಿ ಸಂತ್ರಸ್ಥರನ್ನು ಭೇಟಿ ಮಾಡಲು 24 ಪರಗಣ ಜಿಲ್ಲೆಗೆ ಭೇಟಿ ನೀಡಿದ್ದರು. ದಾಳಿಯಲ್ಲಿ ರೂಪಾ ಅವರ ಕಾರಿಗೆ ತೀವ್ರ ಹಾನಿಯಾಗಿದೆ ಎಂದು ವರದಿಗಳು ಹೇಳಿವೆ.

Comments are closed.