ರಾಷ್ಟ್ರೀಯ

ಪರಿಸರ, ನೀರಿನ ಸಂರಕ್ಷಣೆ ನಮ್ಮ ಕರ್ತವ್ಯ: ಪ್ರಧಾನಿ ಮೋದಿ

Pinterest LinkedIn Tumblr

hghghghhg

ನವದೆಹಲಿ (ಪಿಟಿಐ): ನೀರನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮನ್‌ ಕೀ ಬಾತ್‌ ಕಾಯರ್ಕ್ರಮದಲ್ಲಿ ತಿಳಿಸಿದ್ದಾರೆ.
ಭಾನುವಾರ 20 ನೇ ಸರಣಿಯ ಕಾಯರ್ಕ್ರಮದಲ್ಲಿ ಮಾತನಾಡಿದ ಅವರು ನಾವು ಪರಿಸರದ ಕಡೆ ಕಾಳಜಿ ವಹಿಸದಿದ್ದಕ್ಕೆ ಉಷ್ಣತೆ ಹೆಚ್ಚಾಗುತ್ತಿದೆ ಎಂದು ಮೋದಿ ವಿಷಾದ ವ್ಯಕ್ತಪಡಿಸಿದರು.
ನೀರು ಮತ್ತು ಅರಣ್ಯ ಸಂರಕ್ಷಣೆಯಿಂದ ಮಾತ್ರ ನಾವು ಜಾಗತಿಕ ತಾಪಮಾನವನ್ನು ತಡೆಯಬಹುದು ಎಂದು ಮೋದಿ ತಿಳಿಸಿದರು.
ತಮ್ಮ ಭಾಷಣದಲ್ಲಿ ಅಸ್ಸಾಂ ಚುನಾವಣೆಯ ಫಲಿತಾಂಶ, ವಿವಿಧ ಪರೀಕ್ಷೆಗಳಲ್ಲಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿರುವುದು ಹಾಗೂ ಅಂತರರಾಷ್ಟ್ರೀಯ ಯೋಗಾ ದಿನದ ಬಗ್ಗೆ ಮೋದಿ ಪ್ರಸ್ತಾಪ ಮಾಡಿದರು.

Comments are closed.