ಮನೋರಂಜನೆ

ಮುಂಬೈ- ಲಯನ್ಸ್ ಪಂದ್ಯದ ವೇಳೆ ಪೊಲ್ಲಾರ್ಡ್‌ಗೆ ಬ್ರಾವೋ ಗುದ್ದಿದ್ದೇಕೆ…?

Pinterest LinkedIn Tumblr

polard

ನವದೆಹಲಿ: ವೆಸ್ಟ್ ಇಂಡೀಸ್ ಆಟಗಾರರು ಕ್ರೀಸ್‌ನಲ್ಲಿ ಚೇಷ್ಟೆಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ಶನಿವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಲಯನ್ಸ್ ಪಂದ್ಯದಲ್ಲಿ ಕೆರೋನ್ ಪೊಲ್ಲಾರ್ಡ್ ಬ್ಯಾಟಿಂಗ್ ಮಾಡುತ್ತಿದ್ದಾಗ, ಲಯನ್ಸ್ ಬೌಲರ್ ಡ್ವೇನ್ ಬ್ರಾವೋ, ಪೊಲ್ಲಾರ್ಡ್‌ಗೆ ಗುದ್ದಿದ್ದಾರೆ.

14 ನೇ ಓವರ್‌ನಲ್ಲಿ ಪೊಲ್ಲಾರ್ಡ್‌ಗೆ ಕೊನೆಯ ಬಾಲ್ ಎಸೆದ ನಂತರ ಆತನ ಬಳಿಗೆ ಹೋಗಿ ಗುದ್ದು ನೀಡುವ ಮೂಲಕ ಬ್ರಾವೋ ಕ್ರೀಸ್ ನಲ್ಲಿ ಚೇಷ್ಟೆ ಮಾಡಿದ್ದಾರೆ. ಈ ಹಿಂದೆಯೂ ಬ್ರಾವೋ, ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಮಾಡುತ್ತಿದ್ದಾಗ ಇದೇ ರೀತಿ ಮಾಡಿದ್ದರು.

Comments are closed.