ಮನೋರಂಜನೆ

ಮುಂಬೈ ಇಂಡಿಯನ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸುವ ಮೂಲಕ ಪ್ಲೇ ಆಫ್‌ಪ್ರವೇಶಿಸಿದ ಲಯನ್ಸ್‌ಗುಜರಾತ್

Pinterest LinkedIn Tumblr

raina

ಕಾನ್ಪುರ : ಬ್ರೆಂಡನ್‌ಮೆಕ್ಲಮ್‌(48, 27ಎಸೆತ, 8 ಬೌಂಡರಿ, 1 ಸಿಕ್ಸರ್‌) ಮತ್ತು ಸುರೇಶ್ ರೈನಾ (58, 36ಎ. 8 ಬೌಂ. 2 ಸಿ.) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸಿದ ಗುಜರಾತ್‌ಲಯನ್ಸ್‌ ಐಪಿಎಲ್‌ಒಂಬತ್ತನೇ ಆವೃತ್ತಿಯಲ್ಲಿ ಪ್ಲೇ ಆಫ್‌ಪ್ರವೇಶಿಸಿತು.

ಗ್ರೀನ್ ಪಾರ್ಕ್‌ಕ್ರೀಡಾಂಗಣದಲ್ಲಿ ಟಾಸ್ ಸೋತ ಮುಂಬೈ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 8 ವಿಕೆಟ್‌ಕಳೆದುಕೊಂಡು 172 ರನ್ ಕಲೆ ಹಾಕಿತು. ಸವಾಲಿನ ಗುರಿಯನ್ನು ದಿಟ್ಟತನದಿಂದ ಬೆನ್ನಟ್ಟಿದ ಲಯನ್ಸ್ 17.5 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಕಳೆದುಕೊಂಡು ಗುರಿ ತಲುಪಿತು.

ಲಯನ್ಸ್ ತನ್ನ ಚೊಚ್ಚಲ ಟೂರ್ನಿ ಯಲ್ಲಿಯೇ ಈ ಸಾಧನೆ ಮಾಡಿತು. ಜೊತೆಗೆ ಪಾಯಿಂಟ್ಸ್‌ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು.
ಮುಂಬೈ ತಂಡದ ಉದಯೋನ್ಮುಖ ಆಟಗಾರ ನಿತೀಶ್ ರಾಣಾ (70, 36ಎ. 7 ಬೌಂ. 4 ಸಿ.) ಅವರ ಅರ್ಧಶತಕದ ನೆರವಿನಿಂದ ಮುಂಬೈ ತಂಡ ಉತ್ತಮ ಮೊತ್ತ ಪೇರಿಸಿತ್ತು.

ಆತಂಕ, ಸಂಭ್ರಮ: ಆ್ಯರನ್‌ಫಿಂಚ್‌ಮತ್ತು ದಿನೇಶ್‌ಕಾರ್ತಿಕ್ ಬೇಗನೆ ಔಟಾಗಿದ್ದರಿಂದ ಲಯನ್ಸ್ ತಂಡ ಕೊಂಚ ಒತ್ತಡಕ್ಕೆ ಸಿಲುಕಿತ್ತು. ನಂತರ ಚುಟುಕು ಕ್ರಿಕೆಟ್‌ನ ಪರಿಣತ ಬ್ಯಾಟ್ಸ್‌ಮನ್‌ರೈನಾ ಮತ್ತು ಮೆಕ್ಲಮ್‌ಅಬ್ಬರಿಸಿದರು. ಕೊನೆ ಯಲ್ಲಿ ಡ್ವೇನ್‌ಸ್ಮಿತ್‌(ಔಟಾಗದೆ 37) ಮತ್ತು ರವೀಂದ್ರ ಜಡೇಜ (ಔಟಾಗದೆ 21) ತಂಡವನ್ನು ಗೆಲುವಿನ ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 172 (ರೋಹಿತ್ ಶರ್ಮಾ 30, ನಿತೀಶ್ ರಾಣಾ 70, ಜೋಸ್ ಬಟ್ಲರ್ 33, ಪ್ರವೀಣಕುಮಾರ್ 24ಕ್ಕೆ2, ಧವಳ್ ಕುಲಕರ್ಣಿ 41ಕ್ಕೆ2, ಡ್ವೇನ್ ಸ್ಮಿತ್ 37ಕ್ಕೆ2)

ಗುಜರಾತ್‌ಲಯನ್ಸ್‌17.5 ಓವರ್‌ಗಳಲ್ಲಿ 4 ವಿಕೆಟ್‌ಗೆ 173 (ಬ್ರೆಂಡನ್‌ಮೆಕ್ಲಮ್‌48, ಸುರೇಶ್‌ರೈನಾ 58, ಡ್ವೇನ್‌ಸ್ಮಿತ್‌ಔಟಾಗದೆ 37, ರವೀಂದ್ರ ಜಡೇಜ ಔಟಾಗದೆ 21; ವಿನಯ್‌ಕುಮಾರ್‌2ಕ್ಕೆ17). ಫಲಿತಾಂಶ: ಲಯನ್ಸ್ ತಂಡಕ್ಕೆ 6 ವಿಕೆಟ್‌ಜಯ ಹಾಗೂ ಪ್ಲೇ ಆಫ್‌ಪ್ರವೇಶ.

ಪಂದ್ಯ ಶ್ರೇಷ್ಠ: ಸುರೇಶ್ ರೈನಾ.

Comments are closed.