ಮನೋರಂಜನೆ

ರಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಮೇರಿ ಕೋಮ್ ಕನಸು ಭಗ್ನ!

Pinterest LinkedIn Tumblr

Mary Kom

ಅಸ್ತಾನ: ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ ನ ಎರಡನೆ ಸುತ್ತಿನಲ್ಲಿಯೇ ಮುಗ್ಗರಿಸಿದ ಭಾರತೀಯ ಬಾಕ್ಸಿಂಗ್ ತಾರೆ ಎಂ ಸಿ ಮೇರಿ ಕೋಮ್, ರಿಯೋ ಒಲಂಪಿಕ್ಸ್ ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದು, ಭಾರತವನ್ನು ಪ್ರತಿನಿಧಿಸುತ್ತಿಲ್ಲ.

೨೦೧೨ರ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗಳಿಸಿದ್ದ ಮೇರಿ, ೫೧ ಕೆಜಿಯ ಫ್ಲೈ ವೇಟ್ ವಿಭಾಗದಲ್ಲಿ ಸ್ಪರ್ಧಿಸಿ, ಜರ್ಮನಿಯ ಅಜೀಜಿ ನಿಮಾನಿ ಅವರಿಗೆ ೦-೨ ಅಂತರದಿಂದ ಸೋತಿದ್ದಾರೆ.

ಆಗಸ್ಟ್ ನಲ್ಲಿ ನಡೆಯಲಿರುವ ರಿಯೋ ಒಲಂಪಿಗ್ಸ್ ಗೆ ಅರ್ಹತೆ ಪಡೆಯಲು ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ ಕೊನೆಯ ಅರ್ಹತಾ ಸ್ಪರ್ಧೆಯಾಗಿತ್ತು. ಈ ಸ್ಪರ್ಧೆಯಲ್ಲಿ ಸೆಮಿಫೈನಲ್ಸ್ ತಲುಪಲು ಸಾಧ್ಯವಾಗಿದ್ದರೆ ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸುವ ಅವಕಾಶವಿತ್ತು.

Comments are closed.