ರಾಷ್ಟ್ರೀಯ

ಉಪ ಚುನಾವಣೆ: ಗುಜರಾತ್‌, ಜಾರ್ಖಂಡ್‌ ಬಿಜೆಪಿ, ಉ.ಪ್ರ ಎಸ್‌ಪಿ ಗೆಲುವು

Pinterest LinkedIn Tumblr

878787ಅಹಮದಾಬಾದ್, ಲಕ್ನೊ, ತೆಲಂಗಾಣ(ಪಿಟಿಐ): ವಿವಿಧ ರಾಜ್ಯಗಳಲ್ಲಿ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಬಿಜೆಪಿ, ಜಾರ್ಖಂಡ್‌ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ತಲಾ ಒಂದು ಸ್ಥಾನ, ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌) ಒಂದು, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ(ಎಸ್‌ಪಿ) ಎರಡು ಸ್ಥಾನಗಳಲ್ಲಿ ಗೆಲುವು ಪಡೆದಿವೆ.

ಗುಜರಾತ್‌ನಲ್ಲಿ ಬಿಜೆಪಿಯ ಗೋವಿಂದ ಅವರು 63,899 ಮತ ಗಳಿಸಿ 2,440 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ ಅಭ್ಯರ್ಥಿಯನ್ನು(61458) ಹಿಂದಿಕ್ಕಿದ್ದಾರೆ. ಈ ಸ್ಥಾನ ಕಾಂಗ್ರೆಸ್‌ ಶಾಸಕರ ನಿಧನದಿಂದಾಗಿ ತೆರವಾಗಿತ್ತು.

ಜಾರ್ಖಂಡ್‌ನಲ್ಲಿ ಬಿಜೆಪಿಯ ಅಮಿತ್‌ ಮಂಡಲ್ 1,19,545 ಮತ ಪಡೆದು ಆರ್‌ಜೆಡಿಯ (70,140) ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ಮತ್ತೊಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ದೇವೇಂದ್ರ ಕುಮಾರ್‌ ಅವರು 56,076 ಮತ ಪಡೆದು ಜೆಎಂಎಂ(49,436) ಪಕ್ಷವನ್ನು ಹಿಂದಿಕ್ಕಿದೆ.

ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌) 94,940 ಮತ ಪಡೆದು ಕಾಂಗ್ರೆಸ್‌(49,258) ಅನ್ನು 40 ಸಾವಿರ ಮತಗಳ ಅಂತರದಲ್ಲಿ ಸೋಲಿಸಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ(ಎಸ್‌ಪಿ) ಎರಡು ಸ್ಥಾನಗಳಲ್ಲಿ ಗೆಲುವು ಪಡೆದಿವೆ.

Comments are closed.