ಮನೋರಂಜನೆ

‘ವಿರಾಟ್’ ಪ್ರದರ್ಶನ ! ಪಂಜಾಬ್ ವಿರುದ್ಧ ಆರ್​ಸಿಬಿಗೆ 82 ರನ್ ಗೆಲುವು; ಪ್ಲೇ-ಆಫ್ ಹಂತ ಜೀವಂತ

Pinterest LinkedIn Tumblr

kohli

ಬೆಂಗಳೂರು: ಅಭಿಮಾನಿಗಳ ಪ್ರಾರ್ಥನೆಗೆ ಕಡೆಗೂ ಫಲ ಸಿಕ್ಕಿತು. ಬುಧವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಪಂದ್ಯ ರದ್ದಾಗುವ ಭಯದಲ್ಲಿದ್ದ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ (113ರನ್, 50 ಎಸೆತ, 12 ಬೌಂಡರಿ, 8 ಸಿಕ್ಸರ್) ಹಾಗೂ ಕ್ರಿಸ್ ಗೇಲ್ (73ರನ್, 32 ಎಸೆತ, 4 ಬೌಂಡರಿ, 8 ಸಿಕ್ಸರ್) ಜೋಡಿ ಅಬ್ಬರದ ಬ್ಯಾಟಿಂಗ್ ಮೂಲಕ ರಸದೌತಣ ನೀಡಿತು. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಪ್ಲೇ-ಆಫ್ ಹಂತಕ್ಕೇರಲು ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿ ಕಣಕ್ಕಿಳಿಸಿದ ಆರ್ಸಿಬಿ ಮಳೆ ಬಾಧಿತ ಪಂದ್ಯದಲ್ಲಿ ಡಿಎಲ್ ನಿಯಮದಡಿಯಲ್ಲಿ 82ರನ್ಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮಣಿಸಿತು.

ಚಿನ್ನಸ್ವಾಮಿ ಸ್ಟೇಡಿಯಂ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್ಸಿಬಿ 15 ಓವರ್ಗಳಲ್ಲಿ 3 ವಿಕೆಟ್ಗೆ 211ರನ್ ಪೇರಿಸತು. ಪ್ರತಿಯಾಗಿ ಈ ಬೃಹತ್ ಮೊತ್ತ ಬೆನ್ನಟ್ಟಿದ ಪಂಜಾಬ್ ತಂಡ 14 ಓವರ್ಗಳಲ್ಲಿ 9 ವಿಕೆಟ್ಗೆ 120ರನ್ಗಳಿಸಲಷ್ಟೇ ಶಕ್ತವಾಯಿತು. ಮಳೆಯಿಂದಾಗಿ ಪಂದ್ಯವನ್ನು ತಲಾ 15 ಓವರ್ಗಳಿಗೆ ಇಳಿಸಲಾಯಿತು. ಅಂತಿಮ ಓವರ್ನಲ್ಲಿ ಪಂಜಾಬ್ ಗೆಲ್ಲಲು 92ರನ್ ಅವಶ್ಯಕತೆ ಇದ್ದ ವೇಳೆ ಮತ್ತೊಮ್ಮೆ ಮಳೆ ಬಿದ್ದ ಪರಿಣಾಮ ಡಿಎಲ್ ನಿಯಮದಡಿಯಲ್ಲಿ ಆರ್ಸಿಬಿಗೆ ಗೆಲುವು ಘೊಷಿಸಲಾಯಿತು.

ವಿರಾಟ ಶತಕ ವೈಭವ

ಹಾಲಿ ಟೂರ್ನಿಯಲ್ಲಿ 4ನೇ ಶತಕ ಸಿಡಿಸುವದರೊಂದಿಗೆ ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ 4 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡರು. ಗೇಲ್ ಜತೆ ಇನಿಂಗ್ಸ್ ಆರಂಭಿಸಿದ ಕೊಹ್ಲಿ, ಬೆಂಗಳೂರು ನೆಲದಲ್ಲೇ 3ನೇ ಶತಕ ದಾಖಲಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. 4ನೇ ಓವರ್ನಿಂದ 14ನೇ ಓವರ್ವರೆಗೂ ಗೇಲ್ ಜತೆಗೂಡಿ ಸರಾಸರಿ ಪ್ರತಿ ಓವರ್ಗೆ 18ರಂತೆ ಕೊಹ್ಲಿ ರನ್ಕಲೆಹಾಕಿದರು. ಎಬಿ ಡಿವಿಲಿಯರ್ಸ್ ನಿರಾಸೆ ಅನುಭವಿಸಿದರೆ, ಕನ್ನಡಿಗ ರಾಹುಲ್ (16*ರನ್, 6 ಎಸೆತ, 3ಬೌಂಡರಿ) ಅಂತಿಮ ಓವರ್ನಲ್ಲಿ ಸ್ಪೋಟಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಆರ್ಸಿಬಿ: 15 ಓವರ್ಗಳಲ್ಲಿ 3 ವಿಕೆಟ್ಗೆ 211 (ಕೊಹ್ಲಿ 113, ಗೇಲ್ 73, ರಾಹುಲ್ 16), ಕಿಂಗ್ಸ್ ಇಲೆವೆನ್ ಪಂಜಾಬ್: 14 ಓವರ್ಗಳಲ್ಲಿ 9 ವಿಕೆಟ್ಗೆ 120 (ವೃದ್ಧಿಮಾನ್ 24, ಗುರುಕೀರತ್ 18, ಯಜುವೇಂದ್ರ ಚಾಹಲ್ 25ಕ್ಕೆ 4, ಶೇನ್ ವ್ಯಾಟ್ಸನ್ 7ಕ್ಕೆ 2).

Comments are closed.