ಮನೋರಂಜನೆ

ಇಂದು ಲಯನ್ಸ್ ನೈಟ್​ರೈಡರ್ಸ್ ಮಧ್ಯೆ ನಿರ್ಣಾಯಕ ಪಂದ್ಯ; ಪ್ಲೇ-ಆಫ್ ಹಂತ ಜೀವಂತವಾಗಿರಿಸಲು ಹೋರಾಟ

Pinterest LinkedIn Tumblr

kkr

ಕಾನ್ಪುರ: ಆರ್ಸಿಬಿ ತಂಡದ ಸ್ಟಾರ್ ಬ್ಯಾಟ್ಸ್ ಮನ್ಗಳಾದ ಎಬಿ ಡಿವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ ಆರ್ಭಟಕ್ಕೆ ಹಿಂದಿನ ಪಂದ್ಯಗಳಲ್ಲಿ ತತ್ತರಿಸಿರುವ 2 ಬಾರಿ ಚಾಂಪಿಯನ್ ಕೋಲ್ಕತ ನೈಟ್ರೈಡರ್ಸ್ ಹಾಗೂ ಗುಜರಾತ್ ಲಯನ್ಸ್ ತಂಡಗಳು ಐಪಿಎಲ್-9ರ ಪ್ಲೇ-ಆಫ್ ಹಂತ ಜೀವಂತವಾಗಿರಿಸಿಕೊಳ್ಳಲು ಗುರುವಾರ ಹೋರಾಡಲಿವೆ.

ಗ್ರೀನ್ಪಾರ್ಕ್ ಮೈದಾನದಲ್ಲಿ ನಡೆಯಲಿರುವ ಚೊಚ್ಚಲ ಐಪಿಎಲ್ ಪಂದ್ಯ ಉಭಯ ತಂಡಗಳ ಪಾಲಿಗೆ ನಿರ್ಣಾಯಕವೆನಿಸಿದೆ. ಲಯನ್ಸ್ಗೆ ಇದು ತವರಿನ ಪಂದ್ಯವಾಗಿದ್ದು, ಸುರೇಶ್ ರೈನಾ ಮರಳಿ ಬಂದಿರುವುದರಿಂದ ಹೆಚ್ಚು ವಿಶ್ವಾಸದಲ್ಲಿ ಕಣಕ್ಕಿಳಿಯಲಿದೆ.

ಆಂಡ್ರೆ ರಸೆಲ್ ಅಲಭ್ಯ

ಆರ್ಸಿಬಿ ವಿರುದ್ಧ ಆಡುವ ವೇಳೆ ಗಾಯಗೊಂಡಿದ್ದ ನೈಟ್ರೈಡರ್ಸ್ ತಂಡದ ಸ್ಟಾರ್ ಆಲ್ರೌಂಡರ್ ಆಂಡ್ರೆ ರಸೆಲ್ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಬೌಲಿಂಗ್ನಲ್ಲಿ 15 ವಿಕೆಟ್ ಕಬಳಿಸಿ ಮಿಂಚಿರುವ ರಸೆಲ್ ಬ್ಯಾಟಿಂಗ್ನಲ್ಲೂ ಒಟ್ಟು 188 ರನ್ ಸಿಡಿಸಿ ಕೆಕೆಆರ್ಗೆ ಉಪಯುಕ್ತರಾಗಿದ್ದಾರೆ. ಹೀಗಾಗಿ ರಸೆಲ್ ಅಲಭ್ಯತೆ ಕೆಕೆಆರ್ಗೆ ಹಿನ್ನಡೆಯಾಗುವ ನಿರೀಕ್ಷೆ ಇದೆ.

ರೈನಾ ವಾಪಸ್

ಮಗಳ ಜನನದಿಂದಾಗಿ ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ನಾಯಕ ಸುರೇಶ್ ರೈನಾ ತಂಡ ಕೂಡಿಕೊಂಡಿದ್ದಾರೆ. ಇದರಿಂದ ಲಯನ್ಸ್ ತಂಡ ಮತ್ತೆ ಗರ್ಜಿಸುವ ಹಂಬಲದಲ್ಲಿದೆ.

ಕೆಕೆಆರ್ ಗೆದ್ದರೆ….

ಕೊನೇ ಪಂದ್ಯದಲ್ಲಿ ಸನ್ರೈಸರ್ಸ್ ವಿರುದ್ಧವೂ ಗೆಲ್ಲುವ ಮೂಲಕ ಕೆಕೆಆರ್ ಸುಲಭವಾಗಿ ಪ್ಲೇ-ಆಫ್ಗೇರಬಹುದು. ಸನ್ ಮೇಲೆ ಸೋತರೆ ರನ್ರೇಟ್ ಅವಲಂಬಿಸಬೇಕಾಗುತ್ತದೆ. ಲಯನ್ಸ್ಗೆ ಕೊನೇ ಲೀಗ್ ಪಂದ್ಯದಲ್ಲಿ ಮುಂಬೈ ವಿರುದ್ಧ ಭಾರಿ ಗೆಲುವು ಅನಿವಾರ್ಯವಾಗುತ್ತದೆ. ಯಾಕೆಂದರೆ ಭಾರಿ ಹಿಂದಿರುವ ರನ್ರೇಟ್ ಸುಧಾರಿಸಿಕೊಂಡರಷ್ಟೇ ಪ್ಲೇ-ಆಫ್ಗೆ ಆಸೆ ಪಡಬಹುದು.

ಲಯನ್ಸ್ ಗೆದ್ದರೆ….

ಕೊನೇ ಪಂದ್ಯವನ್ನೂ ಗೆದ್ದರೆ ಲಯನ್ಸ್ ಪ್ಲೇ-ಆಫ್ಗೆ ಏರಬಹುದು. ಆದರೆ ಕೊನೇ ಪಂದ್ಯ ಸೋತರೆ ರನ್ರೇಟ್ ಲೆಕ್ಕಾಚಾರವೇ ಭವಿಷ್ಯ ನಿರ್ಧರಿಸುತ್ತದೆ. ಕೆಕೆಆರ್ಗೆ ಕೊನೇ ಪಂದ್ಯದಲ್ಲಿ ಗೆದ್ದರೂ ರನ್ರೇಟ್ ಅವಲಂಬಿಸಬೇಕಾಗುತ್ತದೆ. ಇತರ ಪಂದ್ಯಗಳ ಫಲಿತಾಂಶ ಪೂರಕವಾಗಿ ಬಂದಿದ್ದರೆ (3ಕ್ಕಿಂತ ಹೆಚ್ಚು ತಂಡ 16 ಅಂಕ ಗಳಿಸಿರದಿದ್ದರೆ) ಕೊನೇ ಪಂದ್ಯ ಸೋತರೂ ರನ್ರೇಟ್ ಲೆಕ್ಕಾಚಾರದ ಮೂಲಕ ಪ್ಲೇ-ಆಫ್ಗೇರುವ ಆಸೆ ಇಡಬಹುದು.

ಕೋಲ್ಕತದಲ್ಲಿ ಮೇ 8ರಂದು ನಡೆದಿದ್ದ ಉಭಯ ತಂಡಗಳ ಕಳೆದ ಮುಖಾಮುಖಿಯಲ್ಲಿ ಕೆಕೆಆರ್ ತಂಡ 5 ವಿಕೆಟ್ಗಳಿಂದ ಲಯನ್ಸ್ಗೆ ಶರಣಾಗಿತ್ತು. ಕೆಕೆಆರ್ ಆರಂಭಿಕ ಆಘಾತದ ನಡುವೆಯೂ 4 ವಿಕೆಟ್ಗೆ 158 ರನ್ ಪೇರಿಸಿದ್ದರೆ, ಲಯನ್ಸ್ 18 ಓವರ್ಗಳಲ್ಲೇ ಗುರಿ ತಲುಪಿತ್ತು.

ಗುಜರಾತ್ ಲಯನ್ಸ್

ಕಳೆದ ಪಂದ್ಯ: ಆರ್ಸಿಬಿ ವಿರುದ್ಧ

144 ರನ್ ಸೋಲು

ಬ್ಯಾಟಿಂಗ್ ಬಲ: ಆರನ್ ಫಿಂಚ್ (313ರನ್), ಸುರೇಶ್ ರೈನಾ (286).

ಬೌಲಿಂಗ್ ಬಲ: ಡ್ವೇನ್ ಬ್ರಾವೊ (12ವಿಕೆಟ್), ಧವಳ್ ಕುಲಕರ್ಣಿ (11).

ಬಲಿಷ್ಠ ಬ್ಯಾಟಿಂಗ್ ಪಡೆ;

ಬ್ರಾವೊ ಆಲ್ರೌಂಡರ್ ನಿರ್ವಹಣೆ;

ಸುರೇಶ್ರೈನಾ ವಾಪಸಾತಿ.

ಗೆದ್ದರಷ್ಟೆ ಉಳಿಗಾಲ; ಕಾಡುತ್ತಿರುವ ಸತತ ವೈಫಲ್ಯ; ಆರಂಭಿಕರ ವೈಫಲ್ಯ.

ಕೋಲ್ಕತ ನೈಟ್ರೈಡರ್ಸ್

ಕಳೆದ ಪಂದ್ಯ: ಆರ್ಸಿಬಿ ವಿರುದ್ಧ 9 ವಿಕೆಟ್ ಸೋಲು

ಬ್ಯಾಟಿಂಗ್ ಬಲ: ಗೌತಮ್ ಗಂಭೀರ್ (455ರನ್), ರಾಬಿನ್ ಉತ್ತಪ್ಪ (333).

ಬೌಲಿಂಗ್ ಬಲ: ಪೀಯುಷ್ ಚಾವ್ಲಾ (11ವಿಕೆಟ್), ಉಮೇಶ್ ಯಾದವ್ (10).

ಸರ್ವಾಂಗೀಣ ನಿರ್ವಹಣೆ; ಗೆದ್ದರೆ ಪ್ಲೇ-ಆಫ್ ಸ್ಥಾನ; ಪಾಂಡೆ-ಗಂಭೀರ್ ಉತ್ತಮ ಬ್ಯಾಟಿಂಗ್.

ರಸೆಲ್ ಅಲಭ್ಯ; ಕೈಕೊಡುತ್ತಿರುವ ಉತ್ತಪ್ಪ; ದಿಢೀರ್ ಕುಸಿತದ ಭೀತಿ.

Comments are closed.