ರಾಷ್ಟ್ರೀಯ

ವೆಂಕಯ್ಯ ನಾಯ್ಡುರನ್ನು ಮತ್ತೆ ರಾಜ್ಯಸಭೆಗೆ ಕಳುಹಿಸುವುದು ಬೇಡ ! ಟ್ವಿಟ್ಟರ್ ನಲ್ಲಿ ಅಭಿಯಾನಕ್ಕೆ ಬೆಂಬಲ

Pinterest LinkedIn Tumblr

NEW DELHI, INDIA - JANUARY 13: Union Urban Development Minister M Venkaiah Naidu during the India Water Week 2015 at Vigyan Bhavan on January 13, 2015 in New Delhi, India. The theme of five day water week is Water Management for Sustainable Development. (Photo by Sonu Mehta/Hindustan Times via Getty Images)

ಬೆಂಗಳೂರು: ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ, ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು ಅವರನ್ನು ಮತ್ತೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡಬಾರದೆಂದು ಟ್ವೀಟರ್ ನಲ್ಲಿ #VenkayyaSakayya ಅಭಿಯಾನ ಆರಂಭವಾಗಿದೆ. ಇದಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ಸೂಚಿಸುತ್ತಿದ್ದಾರೆ.

ವೆಂಕಯ್ಯ ನಾಯ್ಡು ಅವರು ಬಿಜೆಪಿಯಿಂದ ಸತತವಾಗಿ ರಾಜ್ಯಸಭೆಗೆ ಆಯ್ಕೆಯಾಗುತ್ತಿದ್ದಾರೆ. 18ವರ್ಷ ಅವಧಿ ಪೂರೈಸುತ್ತಿರುವ ವೆಂಕಯ್ಯ ನಾಯ್ಡು ಅವರ ರಾಜ್ಯಸಭಾ ಸದಸ್ಯತ್ವ ಜೂನ್ ತಿಂಗಳಿಗೆ ಮುಕ್ತಾಯವಾಗಲಿದೆ. ಆ ನಿಟ್ಟಿನಲ್ಲಿ ನಾಯ್ಡು ಅವರನ್ನು ಮತ್ತೆ ಕರ್ನಾಟಕದಿಂದ ಆಯ್ಕೆ ಮಾಡಬಾರದು ಎಂದು ಟ್ವೀಟರ್ ನಲ್ಲಿ ಅಭಿಯಾನ ಆರಂಭವಾಗಿದೆ.

ಹೊರ ರಾಜ್ಯದ ವೆಂಕಯ್ಯ ನಾಯ್ಡುಗೆ ಕರ್ನಾಟಕದಿಂದ ರಾಜ್ಯಸಭಾ ಸೀಟು ಯಾಕೆ ಎಂಬ ಐಟಿ ಕನ್ನಡ ಬಳಗದ ಪ್ರಶ್ನೆಗೆ ವ್ಯಾಪಕ ಬೆಂಬಲ ಸಿಗತೊಡಗಿದೆ. ಇಷ್ಟು ವರ್ಷಗಳಿಂದ ಕರ್ನಾಟಕದಿಂದ ಅವರು ರಾಜ್ಯಸಭೆಗೆ ಆಯ್ಕೆಯಾಗಿ ಹೋದರೂ ಕೂಡ ಕನ್ನಡ ಕಲಿತಿಲ್ಲ. ಕನ್ನಡ ಜನತೆಗಾಗಿ ಅವರು ಏನೂ ಕೆಲಸ ಮಾಡಿಲ್ಲ ಎಂಬ ಆಕ್ರೋಶ ಕನ್ನಡಿಗರದ್ದು.

Comments are closed.