ಮನೋರಂಜನೆ

ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಎದೆ ಬಡಿತ ಪರೀಕ್ಷಿಸಿಕೊಳ್ಳುತ್ತಾರಂತೆ !

Pinterest LinkedIn Tumblr

MELBOURNE, AUSTRALIA - JANUARY 29:  Virat Kohli of India gestures to Australian fans after India took the wicket of Glenn Maxwell of Australia during the International Twenty20 match between Australia and India at Melbourne Cricket Ground on January 29, 2016 in Melbourne, Australia.  (Photo by Darrian Traynor - CA/Cricket Australia/Getty Images)

ನವದೆಹಲಿ: ಕ್ರಿಕೆಟ್ ಲೋಕದಲ್ಲಿ ಮಿಂಚು ಹರಿಸುತ್ತಿರುವ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಲು ಅಂಗಳಕ್ಕೆ ಇಳಿಯುವ ಮುನ್ನ ತಮ್ಮ ಎದೆ ಬಡಿತವನ್ನು ಪರೀಕ್ಷಿಸಿಕೊಳ್ಳುತ್ತಾರಂತೆ. ಹೃದಯ ಶಾಂತಚಿತ್ತದಿಂದ ಬಡಿಯುತ್ತಿದ್ದರೆ ಅವತ್ತು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತೇನೆ ಎಂದು ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿ ಪ್ರಸ್ತುತ ಐಪಿಎಲ್ ನಲ್ಲಿ ತಾವು ಆಡಿರುವ 12 ಪಂದ್ಯಗಳಲ್ಲಿ 752 ರನ್ ಗಳನ್ನು ಗಳಿಸಿದ್ದಾರೆ. ಇದೆಲ್ಲ ಸಾಧ್ಯವಾಗಿದ್ದು, ತಮ್ಮ ಎದೆ ಬಡಿತ ಶಾಂತಚಿತ್ತದಿಂದ ಬಡಿಯುತ್ತಿರುವುದೇ ಕಾರಣ ಎಂದು ಹೇಳಿಕೊಂಡಿದ್ದಾರೆ.

ಈಡನ್ ಗಾರ್ಡನ್ ನಲ್ಲಿ ಕೋಲ್ಕತ್ತಾ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 75 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದಾದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ನಾನು ಒಂದೇ ತರಹದ ಲಯವನ್ನು ಉಳಿಸಿಕೊಳ್ಳಲು ಸದಾ ಪ್ರಯತ್ನಿಸುತ್ತೇನೆ ಅದಕ್ಕಾಗಿ ಆಟವನ್ನು ಅಪಾರವಾಗಿ ಗೌರವಿಸುತ್ತೇನೆ ಎಂದು ಹೇಳಿದ್ದಾರೆ.

Comments are closed.