ಮನೋರಂಜನೆ

ಯುವರಾಜ್ ಬಯೋಪಿಕ್ ಮಾಡುವಾಸೆಯಿದೆ ಎಂದ ಇಮ್ರಾನ್ ಹಶ್ಮಿ

Pinterest LinkedIn Tumblr

emraan-yuvraj

ಮುಂಬೈ: ಕ್ರಿಕೆಟ್ ಆಟಗಾರ ಮೊಹಮ್ಮದ್ ಅಜರುದ್ದೀನ್ ಅವರ ಬಯೋಪಿಕ್ ‘ಅಜರ್’ನಲ್ಲಿ ಅಜರುದ್ದೀನ್ ಪಾತ್ರ ನಿರ್ವಹಿಸಿರುವ ಬಾಲಿವುಡ್ ನಟ ಇಮ್ರಾನ್ ಹಶ್ಮಿ, ಮತ್ತೊಬ್ಬ ಕ್ರಿಕೆಟರ್ ಯುವರಾಜ್ ಸಿಂಗ್ ಅವರ ಬಯೋಪಿಕ್ ಮಾಡುವ ಆಸೆ ಕೂಡ ಇದೆ ಎಂದಿದ್ದಾರೆ.

ಟ್ವಿಟ್ಟರ್ ನಲ್ಲಿ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿದ ಇಮ್ರಾನ್, ಮುಂದೆ ಯಾವ ಕ್ರಿಕೆಟ್ ಆಟಗಾರನ ಬಯೋಪಿಕ್ ನಲ್ಲಿ ನಟಿಸುತ್ತೀರಿ ಎಂಬ ಪ್ರಶ್ನೆಗೆ “ನಾನೂ ಮತ್ತೊಂದು ಬಯೋಪಿಕ್ ಮಾಡುವಾಸೆ ಇರುವ ಕ್ರಿಕೆಟ್ ಆಟಗಾರ ಯುವರಾಜ್” ಎಂದು ಉತ್ತರಿಸಿದ್ದಾರೆ.

ಮುಂದೆ ಇಮ್ರಾನ್ ‘ಟೈಗರ್’ ಮತ್ತು ‘ರಾಸ್ ರಿಬೂಟ್’ ಸಿನೆಮಾಗಳಲ್ಲಿ ಕಾಣಿಸಿಕೊಳ್ಳಲಿದ್ದು, ಇವುಗಳನ್ನು ಕ್ರಮವಾಗಿ ಡ್ಯಾನಿಸ್ ತನೋವಿಕ್ ಮತ್ತು ವಿಕ್ರಮ್ ಭಟ್ ನಿರ್ದೇಶಿಸಿದ್ದಾರೆ.

‘ರಾಸ್ ರಿಬೂಟ್’ ಬಗ್ಗೆ ಪ್ರತಿಕ್ರಿಯಿಸಿದ ಇಮ್ರಾನ್ “ಇದು ಸೆಪ್ಟಂಬರ್ ನಲ್ಲಿ ಬಿಡುಗಡೆಯಾಗಲಿದೆ, ರಾಸ್-೩ ರ ಹಾರರ್ ಗಿಂತಲು ಇದು ಭಯಂಕರವಾಗಿರುತ್ತದೆ” ಎಂದಿದ್ದಾರೆ.

Comments are closed.