ರಾಷ್ಟ್ರೀಯ

ಲೈಂಗಿಕ ಕಿರುಕುಳ ಪ್ರಕರಣ: ಪಚೌರಿಗೆ ನೋಟಿಸ್‌

Pinterest LinkedIn Tumblr

paನವದೆಹಲಿ(ಪಿಟಿಐ): ಮಹಿಳಾ ಸಹೋದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಇಂಧನ ಮತ್ತು ಸಂಪನ್ಮೂಲ ಸಂಸ್ಥೆಯ(ಟೆರಿ) ಮಾಜಿ ಮುಖ್ಯಸ್ಥ ಆರ್‌.ಕೆ. ಪಚೌರಿ ಅವರಿಗೆ ದೆಹಲಿ ಕೋರ್ಟ್‌ ಶನಿವಾರ ನೋಟಿಸ್ ಜಾರಿ ಮಾಡಿದೆ.

ಪಚೌರಿ ವಿರುದ್ಧ ಭಾರತೀಯ ದಂಡ ಸಂಹಿತೆ ಕಾಯ್ದೆ 354–ಎ, 354–ಬಿ, 354–ಡಿ, 509 ಮತ್ತು 341 ರ ಅಡಿ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಯಲ್ಲಿ ಸಾಕಷ್ಟು ಪೂರಕ ದಾಖಲೆಗಳಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿರುವ ಕೋರ್ಟ್‌, ಜುಲೈ 11ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ ಎಂದು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್‌ ಶಿವಾನಿ ಚೌಹಾಣ್ ತಿಳಿಸಿದ್ದಾರೆ.

ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದ ದೆಹಲಿ ಪೊಲೀಸರು ಮಾರ್ಚ್‌ 1ರಂದು ಕಾಯ್ದೆ 354–ಎ, 354–ಬಿ, 354–ಡಿ, 509 ಮತ್ತು 341ರ ಅಡಿ ಪಚೌರಿ ವಿರುದ್ಧ 1,400 ಪುರಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಸಾಕ್ಷ್ಯಾಧಾರಗಳ ಉಲ್ಲೇಖ ವಿವರ: ತನ್ನ ಬಯಕೆಯನ್ನು ಈಡೇರಿಸದಿದ್ದರೆ ಉದ್ಯೋಗಕ್ಕೆ ಸಂಬಂಧಪಟ್ಟಂತೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪಚೌರಿ ಬೆದರಿಕೆ ಸಹ ಹಾಕಿದ್ದರು’ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

‘ತನಿಖೆ ಸಂದರ್ಭದಲ್ಲಿ 2015ರ ಫೆ.1ರಿಂದ 20ರ ನಡುವೆ ಪಚೌರಿ ಮತ್ತು ಮಹಿಳೆ ನಡುವೆ ನಡೆದ ಸಂಭಾಷಣೆಯ ದೂರವಾಣಿ ಕರೆಗಳ ದಾಖಲೆಗಳನ್ನು ಪಡೆಯಲಾಗಿದೆ. ಮಹಿಳೆಯ ಜತೆ ನಿರಂತರ ಸಂಪರ್ಕದಲ್ಲಿದ್ದ ಪಚೌರಿ ತಡರಾತ್ರಿಯೂ ದೂರವಾಣಿ ಕರೆ ಮಾಡುತ್ತಿದ್ದರು ಹಾಗೂ ಎಸ್‌ಎಂಎಸ್ ಸಂದೇಶ ಕಳುಹಿಸುತ್ತಿರುವುದು ವಿಶ್ಲೇಷಣೆ ಸಂದರ್ಭದಲ್ಲಿ ತಿಳಿದು ಬಂದಿದೆ’ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಸಂಸ್ಥೆಯಲ್ಲಿ ದೊರೆತ ದಾಖಲೆಗಳ ಪ್ರಕಾರ ಪಚೌರಿ ಮಹಿಳೆ ಜತೆ 27 ಬಾರಿ ವಿವಿಧೆಡೆ ಪ್ರವಾಸ ಕೈಗೊಂಡಿದ್ದರು ಎಂದು ತಿಳಿಸಲಾಗಿದೆ.

Write A Comment