ರಾಷ್ಟ್ರೀಯ

ಸುನಂದಾ ಪ್ರಕರಣ ತನಿಖೆಗೆ ಎಸ್‌ಐಟಿ ರಚಿಸಿ: ಕೇಂದ್ರ ಗೃಹ ಸಚಿವರಿಗೆ ಸ್ವಾಮಿ ಪತ್ರ

Pinterest LinkedIn Tumblr

Swamyನವದೆಹಲಿ (ಪಿಟಿಐ): ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣದ ತನಿಖೆ ಮುಂದೆ ಕೊಂಡೊಯ್ಯಲು ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸುವಂತೆ ಒತ್ತಾಯಿಸಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಮತ್ತೆ ಪತ್ರ ಬರೆದಿದ್ದಾರೆ.

ಕಾಂಗ್ರೆಸ್‌ ಮುಖಂಡ ಶಶಿ ತರೂರ್ ಅವರ ಪತ್ನಿ ಸುನಂದಾ ಪ್ರಕರಣದ ತನಿಖೆಯಲ್ಲಿ ದೆಹಲಿ ಪೊಲೀಸರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಪ್ರಕರಣದ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಪೊಲೀಸರ ಕರ್ತವ್ಯ. ಆದರೆ, ತನಿಖಾಧಿಕಾರಿಗಳು ಈತನಕ ದೋಷಾರೋಪ ಪಟ್ಟಿ ಸಲ್ಲಿಕೆಗೂ ಮುಂದಾಗಿಲ್ಲ ಎಂದು ಪತ್ರದಲ್ಲಿ ಸ್ವಾಮಿ ಆರೋಪಿಸಿದ್ದಾರೆ.

‘ಮೃತ ದೇಹದಲ್ಲಿ ಪತ್ತೆಯಾದ ವಿಷದ ಬಗ್ಗೆ ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ಕೂಡ ತನಿಖೆಗೆ ಇಳಿದಿತ್ತು. ವಿಳಂಬವಾದರೂ ಸರಿ, ಅದು ಯಾವ ವಿಷ ಎಂಬುದನ್ನು ತನಿಖಾ ಸಂಸ್ಥೆ ಗುರುತಿಸಿತ್ತು. ಆದರೆ, 2015ರ ಆಗಸ್ಟ್‌ನಿಂದ ಈ ತನಕ ಪ್ರಕರಣದಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಕ್ರಿಮಿನಲ್ ತನಿಖಾ ಪ್ರಕ್ರಿಯೆಗಳಲ್ಲಿ ಕೈಗೊಳ್ಳಲಾಗುವ ಸಾಮಾನ್ಯ ಕ್ರಮಗಳಿಗೂ ಪೊಲೀಸರು ಮುಂದಾಗಿಲ್ಲ’ ಎಂದು ಅವರು ಟೀಕಿಸಿದ್ದಾರೆ.

‘ಈ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಬೇಕು ಹಾಗೂ ಅದನ್ನು ಹೈಕೋರ್ಟ್‌ ಇಲ್ಲವೇ ಸುಪ್ರೀಂ ಕೋರ್ಟ್‌ ನಿಗಾ ವಹಿಸಬೇಕು ಎಂದು ನನಗನಿಸುತ್ತದೆ’ ಎಂದಿದ್ದಾರೆ.

ಇದೇ ವೇಳೆ, ‘ಒಂದು ವೇಳೆ, ಪ್ರಕರಣದಲ್ಲಿ ನಿಸ್ಪಕ್ಷಪಾತ ತನಿಖೆ ನಡೆಯಲಿದೆ ಹಾಗೂ ದೆಹಲಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ ಎಂದು ನಿಮಗನಿಸಿದರೆ, ಈ ಸಂಬಂಧ ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದರಿಂದ ನಾನು ಹಿಂದೆ ಸರಿಯುವೆ. ಪ್ರಕರಣವನ್ನು ನಿಮ್ಮ ವಿವೇಚನೆಗೆ ಬಿಡುವೆ’ ಎಂದೂ ಸ್ವಾಮಿ ಅವರು ತಿಳಿಸಿದ್ದಾರೆ.

ಇದೇ ವಿಷಯವಾಗಿ, 2014ರ ಜುಲೈ ಹಾಗೂ ಡಿಸೆಂಬರ್‌ನಲ್ಲಿ ಸ್ವಾಮಿ ಅವರು ಸಿಂಗ್ ಅವರಿಗೆ ಎರಡು ಬಾರಿ ಪತ್ರ ಬರೆದಿದ್ದರು.

ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರು 2014ರ ಜನವರಿಯಲ್ಲಿ ಪಂಚತಾರಾ ಹೋಟೆಲ್‌ನಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

Write A Comment