ರಾಷ್ಟ್ರೀಯ

ಪ್ರಗ್ಯಾ ಸಾಧ್ವಿಯಾಗಿದ್ದು ಹೇಗೆ

Pinterest LinkedIn Tumblr

praಭೋಪಾಲ್: ಟಿ ಶರ್ಟ್, ಜೀನ್ಸ್ ತೊಟ್ಟು, ತಲೆಗೂದಲು ಕ್ರಾಪ್ ಮಾಡಿಕೊಂಡು ಬೈಕ್‌ನಲ್ಲಿ ಓಡಾಡುತ್ತಿದ್ದ ಗಂಡುಬೀರಿ ಪ್ರಗ್ಯಾ ಸಿಂಗ್ ಠಾಕೂರ್ ಸಾಧ್ವಿ ಆಗಿದ್ದು ಹೇಗೆ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಡುವ ವಿಚಾರ.

ಪ್ರಗ್ಯಾ ಬಿಂದ್‌ ನಿವಾಸಿಯಾಗಿದ್ದ ಆರೆಸ್ಸೆಸ್ ಕಾರ್ಯಕರ್ತ, ಆಯುರ್ವೇದ ವೈದ್ಯರೊಬ್ಬರ ಪುತ್ರಿ. ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಪ್ರಗ್ಯಾ ಅವರಿಗೆ ಕೀಟಲೆ ಮಾಡುತ್ತಿದ್ದ ಹುಡುಗರನ್ನು ಥಳಿಸುವುದೆಂದರೆ ಇಷ್ಟವಾಗಿತ್ತು. ಒಂದು ದಿನ ಕೀಟಲೆ ಮಾಡಿದ ಗೂಂಡಾಗಳನ್ನು ಕ್ಷಮೆ ಕೇಳುವಂತೆ ಪ್ರಗ್ಯಾ ಮತ್ತು ಸೋದರಿ ಚೆನ್ನಾಗಿ ಥಳಿಸಿದ್ದರು.

ಎಬಿವಿಪಿ ಸದಸ್ಯೆಯಾಗಿದ್ದ ಪ್ರಗ್ಯಾ ಆಗಲೇ ಪ್ರಚೋದನಕಾರಿ ಭಾಷಣದಲ್ಲಿ ಬಹಳಷ್ಟು ಪರಿಣತರಾಗಿದ್ದರು. ವಿಶ್ವ ಹಿಮದೂ ಪರಿಷತ್‌ನ ದುರ್ಗಾ ವಾಹಿನಿಯ ಕಾರ್ಯಕರ್ತೆಯಾಗಿದ್ದ ಪ್ರಗ್ಯಾ ‘ಜೈ ವಂದೇ ಮಾತರಂ ಜನ ಕಲ್ಯಾಣ’ ಸಮಿತಿ ರಚಿಸಿದ್ದರು. ಇದು ಇತರ ಸಮುದಾಯದ ಯುವಕರ ಜತೆ ಹೋಗುತ್ತಿದ್ದ ಯುವತಿಯರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿತ್ತು. ಹೀಗೆ ಅವರು ತೊಡಗಿಸಿಕೊಂಡಿದ್ದ ಸಂಘಟನೆ, ತಂದೆಯ ಹಿನ್ನೆಲೆ, ಚಟುವಟಿಕೆಗಳು ಅವರನ್ನು ಆರೆಸ್ಸೆಸ್‌ನ ಸಕ್ರಿಯ ಕಾರ್ಯಕರ್ತೆಯಾಗಿ ರೂಪಿಸಿತ್ತು.

ದ್ವಿಚಕ್ರ ವಾಹನದಲ್ಲೇ ಓಡಾಡುತ್ತಿದ್ದ ಪ್ರಗ್ಯಾ ಸ್ವಾಮಿ ಅವಧೇಶಾನಂದ ಗಿರಿ, ಸಾಧ್ವಿ ಪೂರ್ಣ ಚೇತಾನಂದ ಗಿರಿ ಶರ್ಮ ಅವರ ಒಡನಾಟವೂ ಅವರಿಗೆ ದೊರಕಿತ್ತು. ಬಳಿಕ ಸಾಧ್ವಿಯಾಗಿ ರೂಪುಗೊಂಡ ಅವರು ಇಂದೋರ್‌ನಲ್ಲಿ ರಾಷ್ಟ್ರೀಯ ಜಾಗರಣ್ ಮಂಚ್ ಸ್ಥಾಪಿಸಿದರು. ಆಗ ಅವರು ಜಬಲ್ಪುರ, ಸೂರತ್, ಇಂದೋರ್‌ಗೆ ಓಡಾಡುತ್ತಿದ್ದರು. ಇವರು ಪ್ರಗ್ಯಾ ದ್ವಿಚಕ್ರ ವಾಹನ ನಿಲ್ಲಿಸಿದ್ದ ಸ್ಥಳದಲ್ಲೇ ಮಾಲೇಗಾಂವ್ ಸ್ಫೋಟ ನಡೆದಿತ್ತು. ಹೀಗಾಗಿ ಆ ಪ್ರಕರಣದಲ್ಲಿ ಅವರನ್ನು ಆರೋಪಿಯನ್ನಾಗಿ ಮಹಾರಾಷ್ಟ್ರ ಎಟಿಎಸ್ ವಶಕ್ಕೆ ತೆಗೆದುಕೊಂಡಿತ್ತು. 2007ರಲ್ಲಿ ನಡೆದಿದ್ದ ಆರೆಸ್ಸೆಸ್ ಪ್ರಚಾರಕ ಸುನಿಲ್ ಜೋಶಿ ಅವರ ಹತ್ಯೆಯಲ್ಲೂ ಪ್ರಗ್ಯಾ ಹೆಸರು ಕೇಳಿ ಬಂದಿತ್ತು.

Write A Comment