ರಾಷ್ಟ್ರೀಯ

ಕುಂಭ ಮೇಳ: ಪುರೋಹಿತರೊಂದಿಗೆ ಪುಣ್ಯ ಸ್ನಾನ ಮಾಡಿದ ಜಾಡಮಾಲಿಗಳು

Pinterest LinkedIn Tumblr

kumbhamelaಅಲ್ವಾರ್: ‘ಅಸ್ಪೃಶ್ಯರು’ ಎಂಬ ಭಾವನೆಯನ್ನೇ ಹೊಡೆದೋಡಿಸುವ ನಿಟ್ಟಿನಲ್ಲಿ ಪುರೋಹಿತರು ಹಾಗೂ ಬ್ರಾಹ್ಮಣರು ಜಾಡಮಾಲಿಗಳೊಂದಿಗೆ ಉಜ್ಜೈನಿ ಕುಂಭಮೇಳದ ವೇಳೆ ಕ್ಷಿಪ್ರ ನದಿಯಲ್ಲಿ ಪುಣ್ಯಸ್ನಾನ ಮಾಡುವ ಮೂಲಕ ಹೊಸ ಪದ್ಧತಿಗೆ ನಾಂದಿ ಹಾಡಿದರು.

ಜೀವನದಲ್ಲಿ ಇಂಥದ್ದೊಂದು ಪುಣ್ಯ ಕಾರ್ಯ ಮಾಡುತ್ತೇವೆಂದೇ ಕನಸು ಕಂಡಿರದ ಜಾಡಮಾಲಿಗಳಿಗೆ ಇದೊಂದು ವಿಶೇಷ, ಹೊಸ ಅನುಭವವಾಗಿದ್ದು, ಜೀವನವೇ ಸಾರ್ಥಕವಾದ ಕ್ಷಣವದು.

ಸಮಾಜದಲ್ಲಿ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಇಂಥದ್ದೊಂದು ಕಾರ್ಯಕ್ಕೆ ಮುಂದಾಗಿದ್ದು, ಬ್ರಾಹ್ಮಣ ಪುರೋಹಿತರು ಹಾಗೂ ಸಂಸ್ಕೃತ ವಿದ್ವಾಂಸರು ಇಂಥ ಮಾದರಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

‘ತಾರತಮ್ಯ ನಮಗಂಟಿದ ಶಾಪ. ನಮಗೆ ಶಾಪ ಹಾಕುತ್ತಿದ್ದ ಜನರು, ಅಕಸ್ಮಾತ್ ನಮ್ಮನ್ನು ಮುಟ್ಟಿದರೆ ಹೋಗಿ ಸ್ನಾನ ಮಾಡಿ ಬರುವಂಥ ಕಾಲವೊಂದಿತ್ತು. ಅಂಥ ಸವರ್ಣೀಯರ ಮನಸ್ಸೀಗ ಬದಲಾಗಿದೆ. ಈ ಕಾರಣದಿಂದಲೇ ಸಮಾಜದ ವಿಭಿನ್ನ ವರ್ಗಗಳು ಜತೆಯಾಗಿ ಪುಣ್ಯ ಸ್ನಾನ ಮಾಡುವಂಥ ಸಂದರ್ಭವನ್ನು ಸೃಷ್ಟಿಸಿಕೊಂಡಿದ್ದರು,’ ಎನ್ನುತ್ತಾರೆ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿ ಪಾವನರಾದ ಆಲ್ವಾನ್‌ನ ಉಷಾ ತೋಮರ್.

ಈ ಮುಂಚೆ ಮಲ ಹೋರುವವರಾಗಿ ಕಾರ್ಯನಿರ್ವಹಿಸಿದ್ದ ಸುಮಾರು 200 ಮಹಿಳೆಯರು, ವೃಂದಾವನದ ವಿಧವೆಯರು ಹಾಗೂ ಪುರೋಹಿತರೊಂದಿಗೆ ವೇದ, ಮಂತ್ರ ಘೋಷಗಳೊಂದಿಗೆ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು. ಸಮಾಜದಲ್ಲಿ ಸಮಾನತೆ ತರುವ ದೃಷ್ಟಿಯಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಕಾರ್ಯಕ್ಕೆ ಕೈ ಹಾಕಲಾಗಿತ್ತು.

ಈ ಮಹತ್ಕಾರ್ಯಕ್ಕೆ ಸರ್ಕಾರೇತರ ಸಂಘಟನೆಯಾದ ಸುಲಭ್ ನೈರ್ಮಲೀಕರಣ ಅಭಿಯಾನದ ಡಾ.ಬಿಂದೇಶ್ವರ ಪಾಠಕ್ ನೇತೃತ್ವ ವಹಿಸಿದ್ದರು.

Write A Comment