ಮನೋರಂಜನೆ

ಆ್ಯಂಗ್ರಿ ಬರ್ಡ್ಸ್‌ ಸಿನಿಮಾ ಬಂದಿದೆ ನೋಡಿ

Pinterest LinkedIn Tumblr

angri“ಆ್ಯಂಗ್ರಿ ಬರ್ಡ್ಸ್‌’ ಗೇಮ್‌ ಬಗ್ಗೆ ಬಹುಶಃ ಬಹಳಷ್ಟು ಜನರಿಗೆ ಗೊತ್ತಿರುತ್ತದೆ. ಅದರಲ್ಲೂ ಮಕ್ಕಳ ಫೇವರೇಟ್‌ಗಳ ಪಟ್ಟಿಯಲ್ಲಿ “ಟೆಂಪಲ್‌ ರನ್‌’, “ಸಬ್‌ವೇ ಸಫ‌ìರ್ಸ್‌’, “ಕ್ಯಾಂಡಿ ಕ್ರಶ್‌’ ಮುಂತಾದ ಗೇಮ್‌ಗಳ ಜೊತೆಗೆ “ಆ್ಯಂಗ್ರಿ ಬರ್ಡ್ಸ್‌’ ಸಹ ಒಂದು ಜಾಗ ಪಡೆಯುತ್ತದೆ. ಈಗ ಆ ಗೇಮ್‌, ಮೊದಲ ಬಾರಿಗೆ ಚಿತ್ರವಾಗಿದೆ. ಅಷ್ಟೇ ಅಲ್ಲ, ಇದೇ ತಿಂಗಳ 27ರಂದು ಬಿಡುಗಡೆಯಾಗುತ್ತಿರುವುದು ವಿಶೇಷ.

ಈ ಚಿತ್ರದ ವಿಶೇಷವೇನು ಎಂದರೆ, ನೀವು ಚಿತ್ರಮಂದಿರಕ್ಕೆ ಹೋಗಬೇಕು. ಆದರೂ ಚಿತ್ರದ ಕಥೆಯೇನು ಎಂದರೆ ಪರಿಚಯ ಕೊಡಬಹುದು. “ಆ್ಯಂಗ್ರಿ ಬರ್ಡ್ಸ್‌’ ಎಂಬ ಹೆಸರು, ಹಕ್ಕಿಗಳು ಸಿಟ್ಟಾಗಿವೆ ಎಂದು ಸೂಚಿಸುತ್ತವೆ. ಆದರೆ, ಹಕ್ಕಿಗಳು ಸಿಟ್ಟಾಗುವುದಕ್ಕೆ ಕಾರಣವೇನೆಂದರೆ, ಅದಕ್ಕೆ ಈ ಚಿತ್ರದಲ್ಲಿ ಉತ್ತರವಿದೆ. ಚಿತ್ರ ಶುರುವಾಗುವುದು ಒಂದು ದ್ವೀಪದಲ್ಲಿ. ಆ ದ್ವೀಪದಲ್ಲಿ ಹಕ್ಕಿಗಳದ್ದೇ ಕಾರುಬಾರು. ಇಂಥದ್ದೊಂದು ದ್ವೀಪಕ್ಕೆ ರೆಡ್‌, ಸ್ಪೀಡಿ ಚಕ್‌ ಮತ್ತು ವೊಲಟೈಲ್‌ ಬಾಂಬ್‌ ಎಂಬ ಮೂರು ಹೊರಗಿನ ಹಕ್ಕಿಗಳು ಬರುತ್ತವೆ. ಸ್ಥಳೀಯ ಹಕ್ಕಿಗಳೇ ಇರುವ ಆ ದ್ವೀಪದಲ್ಲಿ, ಈ ಮೂವರು ಹಕ್ಕಿಗಳನ್ನು ಹೊರಗಿನವರು ಎಂದು ದೂರ ಇಟ್ಟಿರಲಾಗಿರುತ್ತದೆ. ಇಂತಹ ಒಂದು ಸಂದರ್ಭದಲ್ಲಿ ಆ ದ್ವೀಪಕ್ಕೆ ಹಸಿರು ಹಂದಿಗಳು ಬರುತ್ತವೆ. ಆ ಹಂದಿಗಳು ಅಲ್ಲಿಗೆ ಏಕೆ ಬಂದಿವೆ ಮತ್ತು ಅದರ ಉದ್ದೇಶವೇನು ಎಂದು ತಿಳಿಯುವ ಜವಾಬ್ದಾರಿಯನ್ನು ಈ ಮೂರು ಹೊರಗಿನ ಹಕ್ಕಿಗಳಿಗೆ ವಹಿಸಲಾಗುತ್ತದೆ. ಆ ಹಕ್ಕಿಗಳು ಅದೇನು ಪತ್ತೆ ಮಾಡುತ್ತವೆ ಎಂಬುದು ಚಿತ್ರದ ಸಸ್ಪೆನ್ಸ್‌.

“ಆ್ಯಂಗ್ರಿ ಬರ್ಡ್ಸ್‌’ ಗೇಮ್‌ ಫ್ರಾಂಚೈಸಿಯಿಂದ ಸ್ಫೂರ್ತಿಗೊಂದು ನಿರ್ಮಾಣವಾದ ಈ ಚಿತ್ರ ಸುಮಾರು 95 ನಿಮಿಷದಷ್ಟು ಇದೆ. ಈ ಚಿತ್ರವನ್ನು ಸುಮಾರು 80 ಮಿಲಿಯನ್‌ ಡಾಲರ್‌ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಬರೀ ಅನಿಮೇಟೆಡ್‌ ಚಿತ್ರಷ್ಟೇ ಅಲ್ಲ, ಥ್ರಿàಡಿ ಅನಿಮೇಟೆಡ್‌ ಚಿತ್ರವೂ ಹೌದು. ಮಕ್ಕಳು ರಜಾ ಮುಗಿಸಿ, ಶಾಲೆಗೆ ಹೋಗುವುದಕ್ಕಿಂತ ಮುನ್ನ, ಒಮ್ಮೆ ಈ ಚಿತ್ರವನ್ನು ನೋಡಿ ಎಂಜಾಯ್‌ ಮಾಡಬಹುದು.
-ಉದಯವಾಣಿ

Write A Comment