ರಾಷ್ಟ್ರೀಯ

ಸೌರ ಶಕ್ತಿಯಿಂದ ಸಂಚರಿಸಲು ಪ್ರಾಯೋಗಿಕ ಪರೀಕ್ಷೆಗೆ ಸಿದ್ಧಗೊಂಡ ದೇಶದ ಮೊದಲ ಸೋಲಾರ್ ರೈಲು

Pinterest LinkedIn Tumblr

solar train

ಜೋಧಪುರ: ಇತ್ತೀಚಿನ ದಿನಗಳಲ್ಲಿ ರೈಲ್ವೆ ಇಲಾಖೆ ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಹೆಚ್ಚಿನ ಒತ್ತು ನೀಡುತ್ತಿದೆ. ಅದರ ಮುಂದುವರೆದ ಭಾಗವಾಗಿ ಸಂಪೂರ್ಣವಾಗಿ ಸೌರ ಶಕ್ತಿಯಿಂದ ಸಂಚರಿಸುವ ದೇಶದ ಮೊದಲ ರೈಲನ್ನು ರೈಲ್ವೆ ಇಲಾಖೆ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲು ಸಿದ್ಧತೆ ಪೂರ್ಣಗೊಳಿಸಿದೆ.

ರೈಲ್ವೆ ಬೋಗಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಲಾಗಿದ್ದು, ಅದರಿಂದ ರೈಲಿಗೆ ಅಗತ್ಯವಿರುವ ಶಕ್ತಿ ಉತ್ಪಾದನೆಯಾಗಲಿದೆ. ಈ ರೈಲನ್ನು ಮೇ ತಿಂಗಳ ಕೊನೆಯ ಭಾಗದಲ್ಲಿ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಗುವುದು. ಪ್ರಾಯೋಗಿಕ ಪರೀಕ್ಷೆಯ ನಂತರ ಈ ರೈಲು ಸಂಚಾರದ ಮಾರ್ಗವನ್ನು ನಿರ್ಧರಿಸಲಾಗುವುದು ಎಂದು ವಾಯವ್ಯ ರೈಲ್ವೆಯ ಪಿಆರ್ಒ ಗೋಪಾಲ್ ಶರ್ಮಾ ತಿಳಿಸಿದ್ದಾರೆ.

ಪ್ರಾಯೋಗಿಕ ಸಂಚಾರದಲ್ಲಿ ಸೋಲಾರ್ ರೈಲನ್ನು ಸಾಂಪ್ರದಾಯಿಕ ಡೀಸೆಲ್ ಇಂಜಿನ್ಗಳ ಸಹಾಯದಿಂದ ಚಲಾಯಿಸಲಾಗುವುದು. ಆದರೆ ರೈಲಿನ ಹವಾನಿಯಂತ್ರಣ ವ್ಯವಸ್ಥೆ, ಲೈಟ್ಗಳು, ಫ್ಯಾನ್ಗಳು ಸೌರ ಶಕ್ತಿಯನ್ನು ಬಳಸಿಕೊಂಡು ಕಾರ್ಯನಿರ್ವಹಿಸಲಿವೆ. ಸೌರಶಕ್ತಿ ಬಳಕೆ ಮಾಡಿಕೊಳ್ಳುವುದರಿಂದ ವಾರ್ಷಿಕ ಸುಮಾರು 90 ಸಾವಿರ ಲೀಟರ್ ಡೀಸೆಲ್ ಉಳಿತಾಯವಾಗಲಿದೆ. ಇದರಿಂದ ಸುಮಾರು 200 ಟನ್ ಕಾರ್ಬನ್ ಡೈಆಕ್ಸೈಡ್ ಬಿಡುಗಡೆ ಆಗುವುದನ್ನು ತಡೆಯಬಹುದು ಎಂದು ಶರ್ಮಾ ತಿಳಿಸಿದ್ದಾರೆ.

ರೈಲ್ವೆ ಇಲಾಖೆ ಸೌರ ಶಕ್ತಿಯ ಜತೆಗೆ ಸಿಎನ್ಜಿ, ಬಯೋ ಡೀಸೆಲ್ ಮತ್ತು ನೈಸರ್ಗಿಕ ಅನಿಲ ಬಳಕೆ ಮಾಡುವ ಕುರಿತೂ ಸಹ ಚಿಂತಿಸುತ್ತಿದೆ. ಈಗಾಗಲೇ ಪ್ರಾಯೋಗಿಕವಾಗಿ ರೋಹ್ಟಕ್-ರೀವರಿ ಮಾರ್ಗದಲ್ಲಿ ಸಿಎನ್ಜಿ ಚಾಲಿತ ಇಂಜಿನ್ ಬಳಕೆ ಮಾಡುತ್ತಿರುವುದರಿಂದ ಇಂಧನ ಉಳಿತಾಯವಾಗುತ್ತಿದೆ.

Write A Comment