ಮನೋರಂಜನೆ

ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನ ಅಲಂಕರಿಸುವಂತೆ ವೆಟೋರಿ ಬಳಿ ಕೇಳಿದ ವಿರಾಟ್ ಕೊಹ್ಲಿ

Pinterest LinkedIn Tumblr

Bangaluru: Royal Challengers Bangalore captain Virat Kohli and RCB coach Daniel Vettori during an IPL-2015 match between Royal Challengers Bangalore and Kolkata Knight Riders at M Chinnaswamy Stadium in Bangaluru on May 2, 2015. (Photo: IANS)

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ತರಬೇತುದಾರರ ಸ್ಥಾನವನ್ನು ತುಂಬುವಂತೆ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಡೇನಿಯಲ್ ವೆಟೋರಿ ಬಳಿ ಕೇಳಿರುವುದು ನಿಜ ಎಂದು ವಿರಾಟ್ ಕೊಹ್ಲಿ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ವೆಟೋರಿ ನೇಮಕಾತಿ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ವಿರಾಟ್, ನಾನು ಎಲ್ಲಾ ವಿಚಾರದಲ್ಲೂ ವಿವಾದ ಸೃಷ್ಟಿಸಿಕೊಳ್ಳಲು ಬಯಸುವುದಿಲ್ಲ. ವೆಟೋರಿ ಬಳಿ ತರಬೇತುದಾರರಾಗುವಂತೆ ಈಗಾಗಲೇ ಮನವಿ ಮಾಡಿಕೊಂಡಿದ್ದೇನೆ. ಆದರೆ ಅವರು ಈ ವಿಚಾರವಾಗಿ ಯಾವುದೇ ರೀತಿಯ ನಿರ್ಧಾರ ತಿಳಿಸಿಲ್ಲ. ವೆಟೋರಿ ಹೊರತುಪಡಿಸಿ ಐದು ಹಿರಿಯ ಮಾಜಿ ಆಟಗಾರರ ಬಳಿ ಕೋಚ್ ಹುದ್ದೆ ಬಗ್ಗೆ ಮಾತುಕತೆ ನಡೆಸಿರುವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಕಳೆದ ತಿಂಗಳು ನಡೆದ ಟಿ20 ವಿಶ್ವಕಪ್ ಬಳಿಕ ಭಾರತದ ಮೆಂಟರ್ ರವಿಶಾಸ್ತ್ರಿ ಅವರ ಅವಧಿ ಮುಗಿದಿದೆ. ಈ ಸ್ಥಾನಕ್ಕೆ ಸ್ಟೀಫನ್ ಪ್ಲೆಮಿಂಗ್, ರಾಹುಲ್ ದ್ರಾವಿಡ್, ಟಾಮ್ ಮೋಡಿ, ಜಸ್ಟಿನ್ ಲ್ಯಾಂಗರ್ ಸೇರಿದಂತೆ ಹಲವು ಆಟಗಾರರ ಹೆಸರು ಕೇಳಿ ಬಂದಿದೆ.

Write A Comment