ಮನೋರಂಜನೆ

ಭಾರತ ಒಲಿಂಪಿಕ್ಸ್ ತಂಡಕ್ಕೆ ರಾಯಭಾರಿಯಾಗಲು ಒಪ್ಪಿಗೆ ನೀಡಿದ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಆರ್ ರೆಹಮಾನ್

Pinterest LinkedIn Tumblr

A.r.rahman

ಮುಂಬೈ: ರಿಯೊ ಒಲಿಪಿಂಕ್ಸ್ ಗೆ ಭಾರತ ತಂಡದ ಸಿದ್ಧತೆ ಭರ್ಜರಿಯಾಗಿ ನಡೆದಿರುವಂತೆಯೇ ತಂಡದ ಮೂರನೇ ರಾಯಭಾರಿಯಾಗಿ ಖ್ಯಾತ ಸಂಗೀತ ನಿರ್ದೇಶಕ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ಎಆರ್ ರೆಹಮಾನ್ ಅವರು ಆಯ್ಕೆಯಾಗಿದ್ದಾರೆ.

ಭಾರತ ಒಲಿಂಪಿಕ್ಸ್ ಸಂಸ್ಥೆ ಗುರುವಾರ ಸ೦ಗೀತ ನಿರ್ದೇಶಕ ಎಆರ್ ರೆಹಮಾನ್‍ರನ್ನು ರಿಯೋ ಒಲಿ೦ಪಿಕ್ಸ್ ಗೆ ತೆರಳಿರುವ ಭಾರತೀಯ ನಿಯೋಗದ ಸದ್ಭಾವನಾ ರಾಯಭಾರಿಯನ್ನಾಗಿ ನೇಮಿಸಿದೆ. ಈಗಾಗಲೇ ನಟ ಸಲ್ಮಾನ್ ಖಾನ್, ಕ್ರಿಕೆಟ್ ದಿಗ್ಗಜ ಸಚಿನ್ ತೆ೦ಡುಲ್ಕರ್ ಮತ್ತು ಶೂಟರ್ ಅಭೀನವ್ ಬಿ೦ದ್ರಾ ನಿಯೋಗದ ಸದ್ಭಾವನಾ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಇವರೊಂದಿಗೆ ರೆಹಮಾನ್ ರನ್ನು ಕೂಡ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ರೆಹಮಾನ್ ರನ್ನು ಭಾರತ ಒಲಿಂಪಿಕ್ಸ್ ತಂಡ ರಾಯಭಾರಿಯನ್ನಾಗಿ ಮಾಡುವ ಪ್ರಸ್ತಾಪ ಇತ್ತಾದರೂ ಈ ವರೆಗೂ ಅವರಿಂದ ಒಪ್ಪಿಗೆ ದೊರೆತಿರಲಿಲ್ಲ. ಗುರುವಾರ ರೆಹಮಾನ್‍ ಅವರು ರಾಯಭಾರಿಯಾಗದಲು ಒಪ್ಪಿಗೆ ನೀಡಿದ್ದಾರೆ ಎಂದು ಐಒಎ ಹೇಳಿದೆ. ಅಲ್ಲದೆ, ತಮ್ಮ ಪ್ರಖ್ಯಾತ ವ೦ದೇ ಮಾತರ೦ ಆಲ್ಬ೦ನ “ಮಾ ತುಜೇ ಸಲಾ೦’ ಗೀತೆಯನ್ನು ಬಳಸಿಕೊಳ್ಳಲು ಐಒಎಗೆ ರೆಹಮಾನ್ ಅನುಮತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

Write A Comment