ರಾಷ್ಟ್ರೀಯ

ಅಗಸ್ಟಾವೆಸ್ಟ್‌ ‌ಲ್ಯಾಂಡ್ ಖರೀದಿಗೆ ಸೋನಿಯಾ ರೂವಾರಿ

Pinterest LinkedIn Tumblr

agaದುಬೈ; ಅಗಸ್ಟಾವೆಸ್ಟ್‌ ‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ರೂವಾರಿ ಎಂದು, ವ್ಯವಹಾರದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ತಿಳಿಸಿದ್ದಾನೆ.

ಪ್ರಸ್ತುತ ದುಬೈನಲ್ಲಿ ಇರುವ ಮೈಕಲ್  ಎನ್‌ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದ್ದಾನೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಈ ಹೆಲಿಕಾಪ್ಟರ್ ವ್ಯವಹಾರ ನಡೆದಿದೆ ಎಂದಿರುವ ಆತ, 2008ರಲ್ಲಿ ಬರೆದ ಪತ್ರವೊಂದರಲ್ಲಿ ತಾನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೊಸ ಅಗಸ್ಟಾ ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಬಗ್ಗೆ ನಿರ್ಣಯ ಕೈಗೊಳ್ಳುವಲ್ಲಿ ಪ್ರಮುಖ ಪ್ರೆರಕ ಶಕ್ತಿಯಾಗಿದ್ದರು’ ಎಂದು ಬಣ್ಣಿಸಿರುವುದು ಸತ್ಯ ಎಂದಿದ್ದಾನೆ.

ಇದೇ ವೇಳೆ ತನಗೆ ವೈಯಕ್ತಿಕವಾಗಿ ಸೋನಿಯಾ ಗಾಂಧಿ ಅವರಾಗಲೀ ಅವರ ಪುತ್ರ ರಾಹುಲ್ ಗಾಂಧಿ ಅವರಾಗಲೀ ಗೊತ್ತಿಲ್ಲ. ಆದರೆ ಅವರ ಬಳಿ ಲಾಬಿ ಮಾಡಲು ತಮಗೆ ತಿಳಿಸಲಾಗಿತ್ತು. ಆದರೆ ಅದರರ್ಥ ಅವರಿಗೆ ಲಂಚ ಪಾವತಿಯಾಗಿದೆ ಎಂದು ಅಲ್ಲ ಎಂದಿದ್ದಾನೆ. ಅಷ್ಟೆ ಅಲ್ಲ ನನ್ನನು ರಕ್ಷಿಸಿಕೊಳ್ಳಲು ನಾನು ಅವರನ್ನು ರಕ್ಷಿಸುವುದು ಅಗತ್ಯ’ ಎಂದು ಹೇಳಿರುವ ಮೈಕಲ್, ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿಯ ಪ್ರಧಾನಿಯನ್ನು ಭೇಟಿಯಾಗಿ ಅಗಸ್ಟಾ ವ್ಯವಹಾರದಲ್ಲಿ ಸೋನಿಯಾ ಗಾಂಧಿ ಅವರನ್ನು ಸಿಲುಕಿಸುವಂತಹ ಮಾಹಿತಿ ಒದಗಿಸಿದರೆ ಕೊಲೆ ಪ್ರಕರಣದಲ್ಲಿ ಸಿಲುಕಿರುವ ಇಬ್ಬರು ಇಟಲಿ ನಾವಿಕರನ್ನು ಬಿಡುಗಡೆ ಮಾಡುವ ಪ್ರಸ್ತಾಪ ಮುಂದಿಟ್ಟಿದ್ದರು ಎಂಬ ಹೇಳಿಕೆಗೆ ತಾನು ಈಗಲೂ ಬದ್ಧ’ ಎಂದಿದ್ದಾನೆ.

ಇತ್ತೀಚೆಗೆ ಇಂಡಿಯಾ ಟುಡೆ ವಾಹಿನಿಗೆ ನೀಡಿದ ಸಂದರ್ಶನದಲ್ಲೂ ಮೈಕಲ್ ತಾನು ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಎ.ಕೆ.ಆ್ಯಂಟನಿ ಅವರನ್ನು ಮುಖತಃ ಭೇಟಿ ಮಾಡಿಲ್ಲ ಎಂದು ತಿಳಿಸಿದ್ದ.

Write A Comment