ರಾಷ್ಟ್ರೀಯ

ನೀರು ಕೊಟ್ಟು ನಾಲ್ಕು ಕೋಟಿ ಕೇಳಿದ ರೈಲ್ವೆ ಇಲಾಖೆ

Pinterest LinkedIn Tumblr

watertrain-k6wF-621x414@LiveMint

ಮಹಾರಾಷ್ಟ್ರ: ದೇಶದಲ್ಲಿಯೇ ಅತ್ಯಂತ ಅಧಿಕ ಪ್ರಮಾಣದಲ್ಲಿ ಬರಪೀಡಿತ ಪ್ರದೇಶಗಳಲ್ಲಿ ಒಂದಾಗಿದ್ದ ಲಾತೂರ್ ಗೆ ರೈಲು ಮೂಲಕ ನೀರು ಪೂರೈಸಿದ್ದ ರೈಲ್ವೆ ಇಲಾಖೆ ಈಗ ಲಾತೂರ್ ನ ಜಿಲ್ಲಾಧಿಕಾರಿಗೆ ನಾಲ್ಕು ಕೋಟಿ ಸಾರಿಗಾ ವೆಚ್ಚವನ್ನು ಬರಿಸುಂತೆ ಬಿಲ್ ಕಳುಹಿಸಿದೆ.

ಭೀಕರ ಬರದಿಂದ ನೀರಿಗಾಗಿ ಹಾಹಾಕಾರ ಉಂಟಾಗಿದ್ದ ಹಿನ್ನೆಲೆಯಲ್ಲಿ ಕಳೆದ ತಿಂಗಳು ರೈಲು ಮೂಲಕ ಲಾತೂರ್ ಗೆ 6 .20 ಕೋಟಿ ನೀರು ಪೂರೈಕೆ ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ ರೈಲ್ವೇ ಇಲಾಖೆ ನಾಲ್ಕು ಕೋಟಿ ರುಪಾಯಿ ಬಿಲ್ ಅನ್ನು ಲಾತೂರ್ ನ ಜಿಲ್ಲಾಧಿಕಾರಿಗೆ ಕಳುಸಿಕೊಟ್ಟಿದೆ.

“ಆಡಳಿತ ವಿಭಾಗದ ಮನವಿಯ ಮೇರೆಗೆ ಲಾತೂರ್ ನ ಜಿಲ್ಲಾಧಿಕಾರಿಗೆ ಸಾರಿಗಾ ವೆಚ್ಚದ ಬಿಲ್ ಕಳಿಸಿದ್ದೇವೆ. ಬಿಲ್ ಪಾವತಿ ಮಾಡುವುದು ಅಥವಾ ಅದನ್ನು ಮನ್ನಾಗೊಳಿಸುವಂತೆ ಮನವಿ ಮಾಡುವುದು ಜಿಲ್ಲಾಡಳಿತದ ವಿವೇಚನೆಗೆ ಬಿಟ್ಟ ವಿಷಯ” ಎಂದು ಕೇಂದ್ರ ರೈಲ್ವೆಯ ವ್ಯವಸ್ಥಾಪಕ ಎಸ್ ಕೆ ಸೂದ್ ತಿಳಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಮನವಿಯ ಹಿನ್ನೆಲೆಯಲ್ಲಿ 50 ಬೋಗಿಗಳನ್ನೊಳಗೊಂಡ 2 ಗೂಡ್ಸ್ ರೈಲುಗಳ ಮೂಲಕ ಲಾತೂರ್ ಜಿಲ್ಲೆಗೆ ಏ.11 -12 ರಂದು ನೀರು ಪೂರೈಕೆ ಮಾಡಲಾಗಿತ್ತು.

Write A Comment