ರಾಷ್ಟ್ರೀಯ

ಕಾಂಗ್ರೆಸ್‌ನಿಂದ ಉಭಯ ಸದನದಲ್ಲಿ ನೋಟಿಸ್‌; ಪ್ರಧಾನಿಯಿಂದ ಹಕ್ಕು ಚ್ಯುತಿ ಉಲ್ಲಂಘನೆ: ಕಾಂಗ್ರೆಸ್‌

Pinterest LinkedIn Tumblr

parನವದೆಹಲಿ(ಪಿಟಿಐ): ಆಗಸ್ಟಾ ವೆಸ್ಟ್‌ಲ್ಯಾಂಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಹಕ್ಕು ಚ್ಯುತಿ ಉಲ್ಲಂಘನೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಸಂಸತ್‌ನ ಉಭಯ ಸದನಗಳಲ್ಲಿ ನೋಟಿಸ್ ನೀಡಿದೆ.
ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣದಲ್ಲಿ ಇಟಲಿ ಕೋರ್ಟ್‌ ಸೋನಿಯಾ ಗಾಂಧಿ ಅವರ ಹೆಸರನ್ನು ಉಲ್ಲೇಖಿಸಿದೆ ಎಂದು ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌, ಮಂಗಳವಾರ ಸಂಸತ್ತಿನ ಉಭಯ ಸದನಗಳಲ್ಲೂ ಗದ್ದಲ ಎಬ್ಬಿಸಿತು.
ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಪ್ರಕರಣ ಕುರಿತು ಚುನಾವಣಾ ಪ್ರಚಾರ ವೇಳೆ ಮಾತನಾಡಿ ಹಕ್ಕು ಚ್ಯುತಿ ಮಾಡಿರುವ ಪ್ರಧಾನಿ ಅವರ ವಿರುದ್ಧ ನೋಟಿಸ್ ನಿಡುವುದಾಗಿ ಕಾಂಗ್ರೆಸ್‌ ಸದಸ್ಯ ಶಾಂತರಾಮ್ ನಾಯ್ಕ ಹೇಳಿದರು.
ಕಲಾಪ ಮುಂದೂಡಿಕೆ: ರಾಜ್ಯಸಭೆಯಲ್ಲಿ ಮಂಗಳವಾರ ಕಾಂಗ್ರೆಸ್‌ ಶಾಸಕರು ಉತ್ತರಾಖಂಡ ವಿಷಯ ಕುರಿತು ಗದ್ದಲ ಎಬ್ಬಿಸಿದ್ದರಿಂದ ಕಲಾಪವನ್ನು ಮುಂದೂಡಲಾಯಿತು.

Write A Comment