ಮನೋರಂಜನೆ

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಆರ್ಸಿಬಿ ವಿರುದ್ಧ 1 ರನ್ ಸೋಲು ಕಂಡದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪ್ರೀತಿ ಝಿಂಟಾ ಹೇಳಿದ್ದೇನು..?

Pinterest LinkedIn Tumblr

Preity Zinta

ನವದೆಹಲಿ: ನಿನ್ನೆ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 1 ರನ್ ಗಳಿಂದ ವಿರೋಚಿತ ಸೋಲು ಅನುಭವಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕೆ ಬಾಲಿವುಡ್ ನಟಿ ಪ್ರೀತಿ ಝಿಂಟಾ ಬೇಸರ ವ್ಯಕ್ತಪಡಿಸಿದ್ದಾರೆ.

ತಂಡದ ನಾಯಕ ಮುರಳಿ ವಿಜಯ್ ಅವರ ಅದ್ಭುತ ಬ್ಯಾಟಿಂಗ್ ಹೊರತು ನಮ್ಮ ತಂಡ ಆರ್ಸಿಬಿ ವಿರುದ್ಧ 1 ರನ್ ನಿಂದ ಸೋಲು ಅನುಭವಿಸಿದ್ದು, ‘ಅದೃಷ್ಟ ನಮ್ಮ ಕಡೆಗಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.

ಆರ್ಸಿಬಿ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಆರ್ಸಿಬಿ ಪರ ಎಬಿಡಿ ವಿಲಿಯರ್ಸ್ ಅದ್ಭುತ ಬ್ಯಾಟಿಂಗ್ ನಿಂದಾಗಿ ತಂಡ 175 ರನ್ ಗಳನ್ನು ಕಲೆ ಹಾಕಿತ್ತು. 176 ರನ್ ಗಳ ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಮುರಳಿ ವಿಜಯ್ 57 ಎಸೆತಗಳಲ್ಲಿ ಭರ್ಜರಿ 89 ರನ್ ಗಳಿಸಿದ್ದರು. ಇದರ ಹೊರತಾಗಿಯೂ ತಂಡ 1 ರನ್ ನಿಂದ ವಿರೋಚಿತ ಸೋಲು ಅನುಭವಿಸಿತ್ತು.

Write A Comment