ಕನ್ನಡ ವಾರ್ತೆಗಳು

ಫ್ರೀ ಪರ್ಮಿಟ್ ಅವ್ಯಹಾರದ ಸಮಗ್ರ ತನಿಖೆ ಹಾಗೂ ಇನ್ನಿತರ ಬೇಡಿಕೆಗಳಿಗೆ ಆಗ್ರಹಿಸಿ ರಿಕ್ಷಾ ಚಾಲಕರಿಂದ ಪ್ರತಿಭಟನೆ

Pinterest LinkedIn Tumblr

Auto_riswhw_protest_1

ಮಂಗಳೂರು,ಮೇ.10: ರಿಕ್ಷಾ ಫ್ರೀ ಪರ್ಮಿಟ್ ಅವ್ಯಹಾರವನ್ನು ಸಮಗ್ರ ತನಿಖೆಗೆ ಒತ್ತಾಯಿಸಿ ಆಟೋ ರಿಕ್ಷಾ FC ಯನ್ನು ಆರ್ ಟಿ.ಒ ಕಚೇರಿ ಬಿಟ್ಟು ಕೂಳೂರಿನಲ್ಲಿ ಮಾಡುವುದನ್ನು ವಿರೋಧಿಸಿ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಮಂಗಳವಾರ ಆಟೋ ರಿಕ್ಷಾ ಚಾಲಕರಿಂದ ಆರ್.ಟಿ.ಓ ಕಛೇರಿ ಚಲೋ ನಡೆಯಿತು.

Auto_riswhw_protest_2 Auto_riswhw_protest_3 Auto_riswhw_protest_4 Auto_riswhw_protest_5 Auto_riswhw_protest_6 Auto_riswhw_protest_7

ಮಂಗಳೂರು ನಗರ ವ್ಯಾಪ್ತಿಯ ವಲಯ 1ರಲ್ಲಿ 680 ಅರ್ಜಿದಾರರಿಗೆ ಫ್ರಿ ಪರ್ಮಿಟ್ ಗೆ ಅರ್ಜಿ ಸಲ್ಲಿಸಿದ್ದು, 590 ಮಂದಿ ಪರವಾನಿಗೆ ಪಡೆದುಕೊಂಡಿದ್ದು, ಇನ್ನು ಉಳಿದ 90 ಮಂದಿಗೆ ಮಂಜೂರಾತಿ ಆದೇಶ ನೀಡಲಾಗಿದೆ. ಆದರೆ ಕೊರಗ ಸಮುದಾಯ 8 ಮಂದಿಗೆ ಪರವಾನಿಗೆ ನೀಡಲಾಗಿದೆ ಎಂದು ಪ್ರತಿಭಟನೆಕಾರರನ್ನು ಉದ್ದೇಶಿಸಿ ಆಟೋ ರಿಕ್ಷಾ ಚಾಲಕರ ಹೋರಾಟ ಸಮಿತಿ ಗೌರವಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಹೇಳಿದರು.

ಆಟೋ ರಿಕ್ಷಾ ಚಾಲಕ ಹೋರಾಟ ಸಮಿತಿ ಅಧ್ಯಕ್ಷ ಯಾಧವ ಮರೋಳಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ, ಲಿಂಗಪ್ಪ ನಂತೂರು, ಮಹಮ್ಮದ್ ಇರ್ಫಾನ್ ಮೊದಲಾದವರು ಉಪಸ್ಥಿತರಿದ್ದರು.

Write A Comment