ರಾಷ್ಟ್ರೀಯ

ದೇಶದಲ್ಲಿ ಇದೇ ಮೊದಲ ಬಾರಿಗೆ ನಕ್ಸಲರ ನಿಗ್ರಹಕ್ಕೆ ಮಹಿಳಾ ಪಡೆ ನಿಯೋಜನೆ

Pinterest LinkedIn Tumblr

girlನವದೆಹಲಿ, ಮೇ 8- ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಕೆಂಪು ಉಗ್ರರ ನಿಗ್ರಹಕ್ಕೆ ದೇಶದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಪಡೆ ಸಜ್ಜಾಗಿದೆ. ವಿವಿಧ ರಾಜ್ಯಗಳ ನಕ್ಸಲ್ ಹಾವಳಿಯ ಜಿಲ್ಲೆಗಳಿಗೆ ಮೊದಲ ಕಂತಾಗಿ 567 ಮಂದಿ ಸಿಆರ್‌ಪಿಎಫ್‌ನ ಮಹಿಳಾ ಸಿಪಾಯಿಗಳು ಬಂದೂಕು ಹಿಡಿದು ಹೊರಟಿದ್ದಾರೆ. ರಾಜಸ್ಥಾನದ ಅಜ್ಮೇರ್ ತರಬೇತಿ ಕೇಂದ್ರದಿಂದ ಕಳೆದ ವಾರವಷ್ಟೆ ಹೊರಬಿದ್ದಿರುವ ಈ 567 ಮಂದಿ ಮಹಿಳೆಯರನ್ನು ನಕ್ಸಲ್ ಹಾವಳಿಯ ಸವಾಲು ಎದುರಿಸುತ್ತಿರುವ ಪ್ರದೇಶಗಳಿಗೆ ನಿಯೋಜಿಸಲಾಗುತ್ತಿದೆ.

ಒಂದೊಂದು ಬಾರಿಗೆ ಈ ಪ್ರದೇಶಗಳಿಗೆ ಒಂದುನೂರು ಜನ ಸಿಆರ್‌ಪಿಎಫ್ ಮಹಿಳಾ ಪಡೆಯನ್ನು ಹಂತ ಹಂತವಾಗಿ ನಿಯೋಜನೆ ಮಾಡಲಾಗುವುದು ಎಂದು ಸಿಆರ್‌ಪಿಎಫ್ ಮಹಾ ನಿರ್ದೇಶಕ ಕೆ.ದುರ್ಗಾಪ್ರಸಾದ್ ತಿಳಿಸಿದ್ದಾರೆ. ಮಹಿಳೆ ಪಡೆ ರಾಜಸ್ಥಾನದ ಅಜ್ಮೇರ್ ತರಬೇತಿ ಕೇಂದ್ರದಿಂದ ಕಳೆದ ವಾರವಷ್ಟೆ ಹೊರಬಿದ್ದಿರುವ ಈ 567 ಮಂದಿ ಮಹಿಳೆಯರನ್ನು ನಕ್ಸಲ್ ಹಾವಳಿಯ ಸವಾಲು ಎದುರಿಸುತ್ತಿರುವ ಪ್ರದೇಶಗಳಿಗೆ ನಿಯೋಜಿಸಲಾಗುತ್ತಿದೆ. ಒಂದೊಂದು ಬಾರಿಗೆ ಈ ಪ್ರದೇಶಗಳಿಗೆ ಒಂದುನೂರು ಜನ ಸಿಆರ್‌ಪಿಎಫ್ ಮಹಿಳಾ ಪಡೆಯನ್ನು ಹಂತ ಹಂತವಾಗಿ ನಿಯೋಜನೆ ಮಾಡಲಾಗುವುದು ಎಂದು ಸಿಆರ್‌ಪಿಎಫ್ ಮಹಾ ನಿರ್ದೇಶಕ ಕೆ.ದುರ್ಗಾಪ್ರಸಾದ್ ತಿಳಿಸಿದ್ದಾರೆ.

ನಕ್ಸಲೀಯರ ತಂಡಗಳಲ್ಲಿ ಮಹಿಳೆಯರು ಸಕ್ರಿಯರಾಗಿ ಭಾಗವಹಿಸುತ್ತಿರುವಾಗ ನಕ್ಸಲ್ ನಿಗ್ರಹಕ್ಕೆ ಮಹಿಳಾ ಪಡೆಯನ್ನೇಕೆ ನೇಮಿಸಬಾರದು. ಅದರಂತೆ ಇವರೂ ಕಠಿಣ ಪರಿಶ್ರಮ ವಹಿಸಿ ಕಾರ್ಯನಿರ್ವಹಿಸಬಾರದು ಎಂಬ ಪರಿಕಲ್ಪನೆಯಲ್ಲಿ ಈ ಪಡೆಗಳ ನಿಯೋಜನೆ ನಡೆದಿದೆ ಎಂದು ಹೇಳಿದ ಅವರು, ಜಂಗಲ್ ವಾರ್‌ಗೆ ಸಂಬಂಧಪಟ್ಟಂತೆ ಮಹಿಳಾ ಸಿಆರ್‌ಪಿಎಫ್ ಸಿಬ್ಬಂದಿಗೆ 44 ವಾರಗಳ ಉತ್ತಮ ತರಬೇತಿ ನೀಡಲಾಗಿದೆ ಎಂದರು. ಒಟ್ಟು ಒಂದು ಸಾವಿರ ಸಿಆರ್‌ಪಿಎಫ್ ಮಹಿಳಾ ಪಡೆ ರಂಗಕ್ಕಿಳಿಯಲಿದೆ.

Write A Comment