ರಾಷ್ಟ್ರೀಯ

ಕೇಸರಿ ಕೊಂದರೆ ನೌಕರಿ : ಧಾರ್ಮಿಕ, ಆರೆಸ್ಸೆಸ್ ನಾಯಕರ ಹತ್ಯೆಗೆ ಡಿ – ಕಂಪನಿ ಆಮಿಷ

Pinterest LinkedIn Tumblr

RSSನವದೆಹಲಿ, ಮೇ ೮ – `ಕೇಸರಿ ನಾಯಕರನ್ನು ಹತ್ಯೆ ಮಾಡಿ ದಕ್ಷಿಣ ಆಫ್ರಿಕಾ ವಿಮಾನ ಹತ್ತಿ, ಅಲ್ಲಿ ನಿಮಗೆ ಒಳ್ಳೆಯ ಕೆಲಸ, ಭರ್ಜರಿ ಮೊತ್ತ ಸಿಗುತ್ತದೆ’ ಇದು ಹಿಂದೂ ನಾಯಕರನ್ನು ಹತ್ಯೆ ಮಾಡಲು ನೋಂದಾಯಿಸಿಕೊಳ್ಳುವ ಯುವಕರ ತಂಡಕ್ಕೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಆಮಿಷ ಗುಜರಾತ್‌ನ 2002 ದಂಗೆ ಮತ್ತು ಮುಸ್ಲಿಂ ವಿರೋಧಿ ಹಿಂದೂ ನಾಯಕರನ್ನೂ ನಿರ್ಮೂಲನೆ ಮಾಡಲು ದಾವೂದ್ ತಂ‌ಡ ಈ ಯೋಜನೆ ರೂಪಿಸಿದೆ ಎಂದು ಯೋಜನೆ ರಾಷ್ಟ್ರೀಯ ತನಿಖಾ ತಂಡ (ಎನ್.ಐ.ಎ) ಹೇಳಿದೆ.
ಆರೋಪ ಪಟ್ಟಿ
ಬಿಜೆಪಿ – ಆರ್.ಎಸ್.ಎಸ್., ವಿ.ಹೆಚ್.ಪಿ. ಭಜರಂಗ ದಳ ಸೇರಿದಂತೆ ಪ್ರಮುಖ ಹಿಂದೂ ನಾಯಕರನ್ನು ಹತ್ಯೆ ಮಾಡುವ ಯೋಜನೆಯಲ್ಲಿಯ 10 ಮಂದಿ ದಾವೂದ್ ಗುಂಪಿನವರ ವಿರುದ್ಧ ಅಹ್ಮದಾಬಾದ್ ನ್ಯಾಯಾಲಯದಲ್ಲಿ ರಾಷ್ಟ್ರೀಯ ತನಿಖಾ ತಂಡ ಆರೋಪ ಪಟ್ಟಿ ದಾಖಲಿಸಿದೆ.
ಈ ಹಿಂದೆ ಹತ್ಯೆಯಾದ ಗುಜರಾತ್‌ ಬಿಜೆಪಿ ಮುಖ್ಯಸ್ಥ ಬರೂಚ್ ಶಿರೀಷ್ ಬಾಗ್ಲೋಡಿ ಮತ್ತು ಬಿಜೆಪಿ ಯುವ ಘಟಕದ ನಾಯಕ ಪ್ರಾಜ್ಞೇಶ್ ಮಿಶ್ರ ಅವರ ಕೊಲೆ ಇದೇ ಯೋಜನೆಯ ಭಾಗವಾಗಿದೆ ಎಂದು ಎನ್.ಐ.ಎ. ಮೂಲಗಳು ತಿಳಿಸಿವೆ.
ಅಹ್ಮದಾಬಾದ್ ನ್ಯಾಯಾಲಯದಲ್ಲಿ ಎನ್.ಐ.ಎ. ದಾಖಲಿಸಿರುವ ಆರೋಪ ಪಟ್ಟಿಯಲ್ಲಿಯ ಕೆಲ ಅಂಶಗಳು ಬೆಚ್ಚಿ ಬೀಳಿಸುತ್ತವೆ. ಹಿಂದೂ ನಾಯಕರ ಮತ್ತು ಸಂಘಟನೆಗಳ ವಿರುದ್ಧ ದಾಳಿ ನಡೆಸಲು ದುಬೈನಿಂದ ಹವಾಲ ದಂಧೆಯ ಮೂಲಕ 50 ಲಕ್ಷ ರೂಪಾಯಿಗಳನ್ನು ಮತ್ತು ಬಂದೂಕುಗಳನ್ನು ದುಬೈನಿಂದ ಸರಬರಾಜಾಗಿವೆ.
ಇವುಗಳ ವ್ಯವಸ್ಥೆ ಮಾಡಿದವನು ದಾವೂದ್ ಬಂಟ ಜಾವೆದ್ ಪಟೇಲ್ ಅಲಿಯಾಸ್ ಚಿಕ್ನಾ. ಚಿಕ್ನಾ ಈಗ ಪಾಕಿಸ್ತಾನದಲ್ಲಿದ್ದಾನೆ.
ಇವೆಲ್ಲ ಮುಂಬೈ ಮತ್ತು ಸೂರತ್‌ನಲ್ಲಿರುವ ತಮ್ಮ ಸಂಪರ್ಕಗಳ ಮೂಲಕ ರವಾನಿಸಲಾಗಿದೆ. ಈ ದಾಳಿ ಯೋಜನೆಯ ಮೊದಲ ಬಲಿಯೇ ಪ್ರಾಜ್ಞೇಶ್ ಮಿಶ್ರ ಮತ್ತು ಶಿರೀಷ್ ಬಾಗ್ಲೋಡಿ.
ಪೆಟ್ರೋಲ್ ಬಾಂಬ್ಸ್
ಚಿಕ್ನಾ ಮೂಲಕ ಹತ್ಯೆ ಸಂಚು ಜಾರಿಗೆ ಯೋಜಿಸಿರುವ ದಾವೂದ್ ಗುಂಪು ಪೆಟ್ರೋಲ್ ಬಾಂಬ್‌ಗಳನ್ನು ಎಸೆಯುವ ಬಗ್ಗೆಯೂ ಇಲ್ಲಿಯ ಗುಂಪುಗಳಿಗೆ ಹೇಳಿದ್ದಾರೆ. ಖಾಲಿಯಾಗಿರುವ ಮದ್ಯದ ಬಾಟಲುಗಳಲ್ಲಿ ಪೆಟ್ರೋಲ್ ತುಂಬಿ ಚರ್ಚ್ ಸೇರಿದಂತೆ ಪೂಜಾ ಸ್ಥಳಗಳ ಮೇಲೆ ಎಸೆಯಲು ಸೂಚಿಸಲಾಗಿದೆ.
ಈ ಮೂಲಕ ದೇಶದಲ್ಲಿ ಕೋಮು ಸಂಘರ್ಷ ಭುಗಿಲೇಳುವಂತೆ ಮಾಡುವುದೇ ಈ ಗುಂಪಿನ ಉದ್ದೇಶ ಎಂದೂ ಎನ್.ಐ.ಎ. ಹೇಳಿದೆ. ಇಂತಹ ಸಂಚು ರೂಪಿಸಿರುವ ದಾವೂದ್ ಗುಂಪಿನಲ್ಲಿ ಸಯ್ಯದ್ ಇಮ್ರಾನ್ ಜೂಹೋಬ್ ಅನ್ಸಾರಿ, ಇನಾಯತ್ ಪಟೇಲ್, ಮೊಹ್ಮದ್ ಯೂನುಸ್, ಹೈದರ್ ಅಲಿ, ನಿಸ್ಸಾರ್ ಬಾಯ್ ಶೇಖ್, ಮೊಹ್ಸಿನ್ ಖಾನ್ ಪಠಾಣ್, ಮೊಹ್ಮದ್ ಅಲ್ತಾಫ್ ಶೇಖ್ ಮತ್ತು ಅಬ್ದುಲ್ ಸಲೀಂ ಘಂಚಿ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

Write A Comment