ಗಲ್ಫ್

ಮನೆಗೆಲಸಕ್ಕೆ ಸೌದಿಗೆ ಹೋದ ಮಹಿಳೆ ಅನುಮಾನಾಸ್ಪದ ಸಾವು

Pinterest LinkedIn Tumblr

asmeeya

ಹೈದರಾಬಾದ್: ಸೌದಿ ಅರೇಬಿಯಾಕ್ಕೆ ಮನೆ ಗೆಲಸಕ್ಕಾಗಿ ಹೋಗಿದ್ದ ಹೈದರಾಬಾದ್ ನ 25 ವರ್ಷದ ಮಹಿಳೆ ಸಾವನ್ನಪ್ಪಿದ್ದಾಳೆ.

ಎದೆ ನೋವಿನಿಂದ ಬಳಲುತ್ತಿದ್ದ ಆಕೋಯನ್ನು ಚಿಕಿತ್ಸೆಗಾಗಿ ಸೌದಿಯ ಕಿಂಗ್ ಸೌದ್ ಆಸ್ಪತ್ರೆಗೆ ದಾಖಲಿಸಿದ್ದ ವೇಳೆ ಮೃತ ಪಟ್ಟಿದ್ದಾಗಿ ಹೇಳಿದ್ದಾರೆ. ಇನ್ನೂ ಆಕೆಯ ಪೋಷಕರು ಮನೆ ಮಾಲೀಕರ ಕಿರುಕುಳದಿಂದಾಗಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದ್ದಾರೆ.

ಮಹಿಳೆಯ ಶವವನ್ನು ಆಕೆಯ ಪೋಷಕರಿಗೆ ತಲುಪಿಸುವ ಸಂಬಂಧ ತೆಲಂಗಾಣ ರಾಜ್ಯದ ಮುಖ್ಯ ಕಾರ್ಯದರ್ಶಿ ಸೌದಿ ರಾಯಭಾರ ಕಚೇರಿಯಾಂದಿಗೆ ಮಾತುಕತೆ ನಡೆಸಿದ್ದಾರೆ.

ಆಸ್ಮಿಯಾ ಖಾತೂನ್ ಹೈದರಾಬಾದ್ ನ ದಬೀರ್ ಪುರ ದ ಶಾಹ್ ಕಾಲೋನಿ ನಿವಾಸಿ, 2015ರ ಡಿಸೆಂಬರ್ ನಲ್ಲಿ ಈಕೆ ರಿಯಾದ್ ಗೆ ತೆರಳಿದ್ದಳು. ಎರಡು ವರ್ಷದ ಹಿಂದೆ ಸರ್ಕಾರ ಮನೆ ಕೆಲಸದವರ ವೀಸಾವನ್ನು ರದ್ದುಗೊಳಿಸಿತ್ತು, ಹೀಗಾಗಿ 90 ದಿನಗಳ ಬ್ಯುಸಿನೆಸ್ ವೀಸಾ ಮೇಲೆ ಆಕೆ ರಿಯಾದ್ ಗೆ ತೆರಳಿದ್ದಳು.

ಹೈದರಾಬಾದ್ ನಿಂದ ಹೊರಟ ಮೇಲೆ ಆಕೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಎರಡು ತಿಂಗಳ ಹಿಂದಷ್ಟೇ ತನ್ನ ತಾಯಿಗೆ ಫೋನ್ ಮಾಡಿ ಮಾತನಾಡಿದ್ದ ಆಕೆ ತಾನು ಇರುವ ಮನೆ ಮಾಲೀಕರು ತನಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರೆಂದು ಹೇಳಿದ್ದಾಳೆಂದು ಆಕೆ ತಾಯಿ ದೂರಿದ್ದಾರೆ. ತನಗೆ ಹಿಂಸೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ತನ್ನನ್ನು ವಾಪಸ್ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದಳು ಎಂದು ಆಕೆ ತಾಯಿ ಹೇಳಿದ್ದಾರೆ.

Write A Comment