ಮನೋರಂಜನೆ

ದುಬಾರಿ ಬಾಲ ಕಲಾವಿದರು…ಬಾಲ ನಟರಲ್ಲಿಯೂ ಭಾರಿ ಪೈಪೋಟಿ

Pinterest LinkedIn Tumblr

salman-bajrangi

ಚಿತ್ರರಂಗದಲ್ಲಿ ನಾಯಕ-ನಾಯಕಿಯರ ನಂಬರ್ ಒನ್ ಪಟ್ಟ ವರ್ಷ ವರ್ಷವೂ ಏರುಪೇರು ಆಗುತ್ತಲೇ ಇರುತ್ತದೆ. ಆದೆರ ಬಾಲ ನಟರಲ್ಲಿಯೂ ಭಾರಿ ಪೈಪೋಟಿ ನಡೆಯುತ್ತಿದೆ ಎಂಬುದು ನಿಜಕ್ಕೂ ಅಚ್ಚರಿ…..

ಮನೋಜ್ಞ ನಟನೆಯಿಂದಲೇ ಮುದ್ದಾಗಿ ಮುದ್ದಾಗಿ ಬಾಲಿವುಡ್‌ನಲ್ಲಿ ಗಮನ ಸೆಳೆಯುತ್ತಿರುವ ಬಾಲ ನಟರು ತಾವು ಯಾರಿಗೂ ಕಮ್ಮಿ ಇಲ್ಲ ಎಂಬುದುನ್ನು ಸಾಬೀತು ಮಾಡಿದ್ದಾರೆ.

ನಟ- ನಟಿಯರಲ್ಲಿ ಈ ವರ್ಷ ನಂಬರ್ ಒನ್ ಇದ್ದವರು ಮರು ವರ್ಷ ಕೆಳಗಿನ ಪಟ್ಟಕ್ಕೆ ಇಳಿಯುವುದು, ಕೆಳಗಿದ್ದವರು ಮೇಲಕ್ಕೆ ಹೋಗುವುದು ಮಾಮೂಲು. ಹೊಸಹೊಸ ಮುಖಗಳ ಪರಿಚಯ ಆಗುತ್ತಲೇ, ಹಳಬರ ಪಟ್ಟಿ ಹಿಂದಕ್ಕೆ ಸರಿಯುತ್ತಾ ಹೋದರೆ, ಲಕ್ ಇದ್ದವರು ಮಾತ್ರ ತಮ್ಮ ಸ್ಥಾನ ಭದ್ರವಾಗಿಸಿಕೊಳ್ಳುತ್ತಾರೆ. ಪಟ್ಟ ಮೇಲೇರಿದಷ್ಟು ಸಂಭಾವನೆ ಮೇಲೇರುವುದು ಸಹಜ ಹಾಗೆಯೇ ಬಾಲ ಕಲಾವಿದರು ಕೂಡ ನಂಬರ್ ಸ್ಥಾನಕ್ಕೆ ಪೈಪೋಟಿ ನಡೆಸುವುದು ಮಾತ್ರವಲ್ಲ ತಾವು ತೆಗೆದುಕೊಳ್ಳವ ಸಂಭಾವನೆಯಲ್ಲೂ ಸಕತ್ತ ಡಿಮ್ಯಾಂಡ್ ಇದೆ ಎನ್ನುವುದನ್ನು ತೋರಿಸಿದ್ದಾರೆ.

ಅದರಲ್ಲಿ ಹರ್ಷಣಿ ಮಾಲೋತ್ರ, ದರ್ಶಿಲ್ ಕುಮಾರ್, ದಿಯಾ ಚಲಾವಾಡ್, ಸಾರಾ ಅರ್ಜುನ್, ಹರ್ಷ ಮಯಾರ್ ಅವರುಗಳು ಬಾಲಿವುಡ್ ಸಕತ್ ಸುದ್ದಿ ಮಾಡುತ್ತಿರುವ ಬಾಲ ಕಲಾವಿದರು ಹಾಗೂ ದುಬಾರಿ ಬಾಲ ನಟರು ಹೌದು…..

ಬಾಲಿವುಡ್‌ನಲ್ಲಿ ಪ್ರತಿವರ್ಷದ ಅಂತ್ಯದಲ್ಲಿ ವರ್ಷದ ‘ದುಬಾರಿ ನಟ-ನಟಿ’ಯರ ಪಟ್ಟಿ ತಯಾರಾಗುತ್ತದೆ. ಅದರಂತೆ ಇನ್ನು ಮುಂದೆ ಬಾಲಿವುಡ್ ದುಬಾರಿ ಬಾಲ ಕಲಾವಿದರ ಪಟ್ಟಿಯೂ ಸಿದ್ಧಗೊಳಿಸುವುದು ಸಾಮಾನ್ಯವಾಗಲಿದೆ.
ಕಂಗನಾ ರನೋಟ್, ದೀಪಿಕಾ ಪಡುಕೋಣೆ, ಕರೀನಾ ಕಪೂರ್, ಪ್ರಿಯಾಂಕಾ ಚೋಪ್ರಾ, ಕತ್ರೀನಾ ಕೈಫ್ ಪ್ರಸುತ್ತ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಮಣಿಯರು ಎನಿಸಿಕೊಂಡಿದ್ದಾರೆ. ಇವರು ತಾವು ಒಪ್ಪಿಕೊಳ್ಳವ ಸಂಪೂರ್ಣ ಚಿತ್ರಕ್ಕೆ ಸಂಭಾವನೆ ಪಡೆಯುತ್ತಾರೆ ಆದರೆ ಈ ಪುಟಾಣಿಗಳು ಚಿತ್ರದ ಕೆಲ ಶಾಟ್‌ಗಳಿಗೆ ಸಂಭಾವನೆ ಪಡೆಯುತ್ತಾರೆ.

ಇತ್ತೀಚೆಗೆ ತೆರೆಗೆ ಬಂದು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಕಂಡ ಭಜರಂಗಿ ಬಾಯಿಜಾನ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದರ್ಪಣೆ ಮಾಡಿದ ಹರ್ಷಣಿ ಮಾಲೋತ್ರ ನಟಿಸಿದ ಮೊದಲ ಚಿತ್ರದಲ್ಲಿ ಅಮೋಘವಾಗಿ ನಟಿಸಿ ಎಲ್ಲರ ಮನ ಗೆದ್ದರೆ, ಆಕೆ ಆ ಪಾತ್ರಕ್ಕಾಗಿ ಲಕ್ಷಕ್ಕೂ ಹೆಚ್ಚು ಸಂಭಾವನೆ ಪಡೆದು ಬಾಲಿವುಡ್‌ನ ದುಬಾರಿ ಬಾಲನಟಿ ಪಟ್ಟಿಗೆ ಸೇರಿದ್ದಾರೆ.

ಪ್ರೇಮ್ ರತನ್ ದಾನ್ ಪಾಯೋ ಚಿತ್ರದಲ್ಲಿ ಬಾಲ ನಟನಾಗಿ ಗಮನ ಸೆಳೆದ ದರ್ಶಿಲ್ ಕುಮಾರ್ ಅವರು ತಮ್ಮ ಚಿಕ್ಕ ಪಾತ್ರಕ್ಕೆ ೩೦ ಸಾವಿರಕ್ಕೂ ಹೆಚ್ಚು ಹಣ ಪಡೆದಿದ್ದಾರೆ ಎನ್ನಲಾಗಿದೆ.
ಬಾಲಿವುಡ್ ಹ್ಯಾಂಡ್‌ಸಮ್ ನಟ ಜಾನ್ ಅಬ್ರಾಹಂನೊಂದಿಗೆ ರಾಕಿ ಚಿತ್ರದಲ್ಲಿ ಪರದೆ ಹಂಚಿಕೊಂಡಿರುವ ಬಾಲ ನಟಿ ದಿಯಾ ಚಲಾವಾಡ್ ಕೂಡ ಒಂದು ಶಾಟ್‌ಗೆ ೨೫ ಸಾವಿರ ರೂ ಸಂಭಾವನೆ ಪಡೆದು ದುಬಾರಿ ಎನಿಸಿಕೊಂಡಿದ್ದಾರೆ.

ಇನ್ನು ೧೧ ವರ್ಷದಲ್ಲೇ ಅದ್ಭತ ಬಾಲ ನಟ ಎಂದು ಸಾಬೀತಪಡಿಸಿರುವ ಹಾಗೂ ‘ಆಮ್ ಕಲಾಂ’ ಚಿತ್ರದಲ್ಲಿ ಎಲ್ಲರ ಮೆಚ್ಚವಂತೆ ನಟಿಸಿರುವ ಹರ್ಷ ಮಯಾರ್ ಅವರು ಕೇವಲ ೨೨ ದಿನದ ಚಿತ್ರೀಕರಣಕ್ಕಾಗಿ ಸುಮಾರು ಒಂದು ಲಕ್ಷ ರೂ ಸಂಭಾವನೆ ಪಡಿದಿದ್ದಾರೆ.

ಈಗಾಗಲೇ ಬಾಲಿವುಡ್‌ನಲ್ಲಿ ತನ್ನ ಭಿನ್ನಾಣದಿಂದ ಸಕತ್ ಹಾಟ್ ಬಾಲನಟಿ ಎಂದು ಗುರುತಿಸಿಕೊಂಡಿರುವ ಸಾರಾ ಅರ್ಜುನ್ ಒಂದು ಚಿತ್ರಕ್ಕೆ ಲಕ್ಷಾಂತರ ರೂ ಸಂಭಾವನೆ ಪಡೆಯುತ್ತಾರೆ. ನಟ ರಾಜ್ ಅರ್ಜುನ್ ಅವರ ಪುತ್ರಿಯಾದ ಈಕೆ ಬಾಲಿವುಡ್‌ನಲ್ಲಿ ಏಕ್ ತಿ ದಯಾನ್, ಜಾಜ್ಬಾ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಅಪ್ಪ ಗರಡಿ ಬೆಳೆದ ಈ ಬಾಲ ಚತುರೆ ನಟನೆಯಲ್ಲಿ ಕೂಡ ಸೈ ಎನಿಸಿಕೊಂಡಿದ್ದಾರೆ.

Write A Comment