ಮನೋರಂಜನೆ

ಪಾಕ್ ಕೋಚ್ ಹುದ್ದೆ ಬೇಡ; ಟೀಂ ಇಂಡಿಯಾ ಓಕೆ: ಸ್ಟುವರ್ಟ್ ಲಾ

Pinterest LinkedIn Tumblr

stuart-law

ಮುಂಬೈ: ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಹುದ್ದೆಯ ಆಫರ್ ಅನ್ನು ತಿರಸ್ಕರಿಸಿರುವ ಮಾಜಿ ಆಸ್ಟ್ರೇಲಿಯಾದ ಕ್ರಿಕೆಟಿಗ ಸ್ಟುವರ್ಟ್ ಲಾ ಅವರು ಟೀಂ ಇಂಡಿಯಾದ ಕೋಚ್ ಆಗಲು ಆಸಕ್ತಿ ತೋರಿದ್ದಾರೆ.

ಹೌದು ಆಗಂತ ಸ್ಟುವರ್ಟ್ ಲಾ ಅವರೆ ಹೇಳಿಕೊಂಡಿದ್ದಾರೆ. ಸದ್ಯ ಕ್ರಿಕೆಟ್ ಆಸ್ಟ್ರೇಲಿಯಾದ ಎ ತಂಡದ ಕೋಚ್ ಆಗಿರುವ ಸ್ಟುವರ್ಟ್ ಲಾ ಅವರು ಮುಂಬರುವ ಶ್ರೀಲಂಕಾದ ಪ್ರವಾಸಕ್ಕಾಗಿ ತಂಡದೊಂದಿಗೆ ಭಾರತಕ್ಕೆ ಬಂದಿಳಿದಿದ್ದಾರೆ.

ಈ ವೇಳೆ ಪತ್ರಕರ್ತರು ಭಾರತದ ಕೋಚ್ ಹುದ್ದೆ ಖಾಲಿಯಿದ್ದು ತಾವು ಕೋಚ್ ಆಗುತ್ತೀರಾ ಎಂದು ಕೇಳಿದ್ದಕ್ಕೆ ಹೌದು ಟೀಂ ಇಂಡಿಯಾದ ಜತೆ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ ಅದು ಕ್ರಿಕೆಟ್ ಆಸ್ಟ್ರೇಲಿಯಾದ ಗುತ್ತಿಗೆ ಮುಗಿದ ನಂತರ ಎಂದು ಹೇಳಿದ್ದಾರೆ.

ತತ್ ತಕ್ಷಣ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಹುದ್ದೆಯನ್ನು ಸ್ವೀಕರಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಆಫರ್ ನೀಡಿತ್ತು. ಆದರೆ ಕ್ರಿಕೆಟ್ ಆಸ್ಟ್ರೇಲಿಯಾದ ಜತೆಗಿನ ಗುತ್ತಿಗೆ ಆಗಸ್ಟ್ 25ರವರೆಗೆ ಇವುದರಿಂದ ಪಿಸಿಬಿ ಆಫರ್ ತಿರಸ್ಕರಿಸಬೇಕಾಯಿತು ಎಂದು ಲಾ ಹೇಳಿದ್ದಾರೆ.

ಕೋಚ್ ಹುದ್ದೆ ತಿರಸ್ಕರಿಸಲು ಅಭದ್ರತೆ ಕಾರಣವಲ್ಲ
ಭಯೋತ್ಪಾದನೆಯಿಂದಾಗಿ ಪಾಕಿಸ್ತಾನದಲ್ಲಿ ಕ್ರಿಕೆಟ್ ಗೆ ಅಭದ್ರತೆ ಕಾಡುತ್ತಿದೆ. ಇದೇ ಕಾರಣಕ್ಕೆ ಪಾಕ್ ಹೊರತುಪಡಿಸಿ ಯಾವುದೇ ತಂಡದ ಆಟಗಾರರು ಪಾಕ್ ಕೋಚ್ ಹುದ್ದೆ ಅಲಂಕರಿಸಲು ಮುಂದೆ ಬರುತ್ತಿಲ್ಲ ಎಂಬ ಅಪವಾದವನ್ನು ಅಲ್ಲಗಳೆದ ಸ್ಟುವರ್ಟ್ ಲಾ ನಾನು ಪಾಕ್ ಕೋಚ್ ಹುದ್ದೆಯನ್ನು ತಿರಸ್ಕರಿಸಲು ಅಭದ್ರತೆ ಕಾರಣವಲ್ಲ ಎಂದು ತಿಳಿಸಿದ್ದಾರೆ.

Write A Comment