
ಉಜ್ಜೈನಿ: ಭಾರಿ ಗಾಳಿ, ಮಳೆಯ ಪರಿಣಾಮವಾಗಿ ಉಜ್ಜೈನಿ ಸಿಂಹಷ್ಠ ಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಕನಿಷ್ಠ 7 ಜನ ಭಕ್ತರು ಸಾವನ್ನಪ್ಪಿ, 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಭಾರೀ ಗಾಳಿ ಮಳೆಯ ಮಧ್ಯೆ ಟೆಂಟ್ ಒಂದು ಕುಸಿದ ಪರಿಣಾಮವಾಗಿ ಗಾಭರಿಗೊಂಡ ಭಕ್ತರು ಓಡತೊಡಗಿದಾಗ ಕಾಲ್ತುಳಿತ ಸಂಭವಿಸಿತು ಎಂದು ಮೂಲಗಳು ಹೇಳಿವೆ.
ಪ್ರತಿ 12 ವರ್ಷಕ್ಕೆ ಒಮ್ಮೆ ಒಂದು ತಿಂಗಳ ಕಾಲ ನಡೆಯುವ ಕುಂಭ ಮೇಳದಲ್ಲಿ ಸುಮಾರು 5 ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಮೇಳದ ವ್ಯವಸ್ಥೆ ಬಗ್ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಿಸಿದ್ದರು.