ಕನ್ನಡ ವಾರ್ತೆಗಳು

ಬರಗಾಲ ನಿವಾರಣೆಗಾಗಿ ಸಾಮರಸ್ಯ ವೇದಿಕೆ ವತಿಯಿಂದ ಶ್ರೀ ಸೋಮನಾಥ ದೇವರಿಗೆ ಪ್ರಾರ್ಥನೆ ಸಲ್ಲಿಕೆ.

Pinterest LinkedIn Tumblr

ulalal_rain_pooja

ಮಂಗಳೂರು,ಮೇ.06: ಬರಗಾಲದಲ್ಲಿ ಇಡೀ ರಾಜ್ಯದ ಜನರು ನೀರಿಗಾಗಿ ತತ್ತರಿಸಿ ಹೋಗಿದ್ದು, ಆದಷ್ಟು ಬೇಗ ಮಳೆ ಬರಲಿ ಎಂದು ಉಳ್ಳಾಲ ಸಾಮರಸ್ಯ ವೇದಿಕೆ ನೇತೃತ್ವದಲ್ಲಿ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಜಿಲ್ಲಾ ಪಂಚಾಯತ್ ಪಂಚಾಯತ್ ಸದಸ್ಯರಾದ ಶ್ರೀಮತಿ ಧನಲಕ್ಷ್ಮಿ ಮಾತನಾಡಿ ಶ್ರೀ ಸೋಮನಾಥ ದೇವರ ದಯದಿಂದ ಆದಷ್ಟು ಬೇಗ ಮಳೆ ಬಂದು ಜನರ ಸಮಸ್ಯೆ ದೂರ ಆಗಲಿ ಎಂದು ಹಾರೈಸಿದರು.

ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕೆ.ಟಿ ಸುವರ್ಣ,ಉದ್ಯಮಿ ಶ್ರೀ ಹರೀಶ್ ಕುಮಾರ್ ಕುತ್ತಾರ್,ಮಾಜಿ ಜಿಲ್ಲಾ ಪಂಚಾಯತ್ ಉಪಾದ್ಯಕ್ಷರಾದ ಸತೀಶ್ ಕುಂಪಲ,ತಾಲೂಕು ಪಂಚಾಯತ್ ಸದಸ್ಯ ರವಿಶಂಕರ್,ಚಂದ್ರಹಾಸ ಅಡ್ಯಂತಾಯ,ಕೆ ರವೀಂದ್ರ ಶೆಟ್ಟಿ ಉಳಿದೊಟ್ಟು,ಜೀವನ್ ಕುಮಾರ್ ತೊಕ್ಕೊಟ್ಟು ,ಹರೀಶ್ ಅಂಬ್ಲಮೊಗರು,ದಯಾನಂದ್ ತೊಕ್ಕೊಟ್ಟು,ಆನಂದ್ ಶೆಟ್ಟಿ,ರಾಜೇಶ್ ಮುಂಡೋಳಿ,ರಾಮ್ ಮೋಹನ್ ಅಂಬ್ಲಮೊಗರು,ರವಿರಾಜ್ ಸೋಮೇಶ್ವರ ಉಪಸ್ಥಿತರಿದ್ದರು.

Write A Comment