ರಾಷ್ಟ್ರೀಯ

ಇಡಿಯಿಂದ ತ್ಯಾಗಿ ವಿಚಾರಣೆ

Pinterest LinkedIn Tumblr

gggggggನವದೆಹಲಿ (ಪಿಟಿಐ): ಆಗಸ್ಟಾ ವೆಸ್ಟ್‌ಲ್ಯಾಂಡ್ ಕಂಪೆನಿಯ ಹೆಲಿಕಾಪ್ಟರ್ ಖರೀದಿ ವ್ಯವಹಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಭಾರತೀಯ ವಾಯು ಪಡೆಯ (ಐಎಎಫ್) ಮಾಜಿ ಮುಖ್ಯಸ್ಥ ಎಸ್. ಪಿ. ತ್ಯಾಗಿ ಅವರನ್ನು ಗುರುವಾರ ವಿಚಾರಣೆಗೆ ಒಳಪಡಿಸಿದ್ದಾರೆ.
ತ್ಯಾಗಿ ಅವರು ಬೆಳಿಗ್ಗೆ 11 ಗಂಟೆಗೆ ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿದರು. ನಂತರ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟಾ ವೆಸ್ಟ್‌ಲ್ಯಾಂಡ್ ಕಂಪೆನಿಗೆ ಅನುಕೂಲ ಮಾಡಿಕೊಡುವ ಉದ್ದೇಶ ದಿಂದ ಹೆಲಿಕಾಪ್ಟರ್ ಹಾರಾಟದ ಎತ್ತರದ ಮಿತಿಯನ್ನು ಆರು ಸಾವಿರ ಮೀಟರ್‌ನಿಂದ ನಾಲ್ಕು ಸಾವಿರ ಮೀಟರ್‌ಗೆ ಇಳಿಸುವ ನಿರ್ಧಾರವನ್ನು ತ್ಯಾಗಿ ತೆಗೆದುಕೊಂಡಿರುವುದು ಮತ್ತು ಕಮೀಶನ್‌ ಹಣ ಪಡೆದಿರುವ ಆರೋಪ ಇವರ ಮೇಲಿದೆ.

Write A Comment