ರಾಷ್ಟ್ರೀಯ

ಬಡವರಾದ ನಮಗೆ ನ್ಯಾಯ ಕೊಡಿಸಿ: ಸಾಮೂಹಿಕ ಅತ್ಯಾಚಾರಕ್ಕೊಳಗಾದ ಪುಟ್ಟ ಬಾಲಕಿಯ ಸಹೋದರನಿಂದ ಮೋದಿಗೆ ಪತ್ರ…

Pinterest LinkedIn Tumblr

Modi

ಜೈಪುರ: ನನ್ನ 12 ವರ್ಷದ ಪುಟ್ಟ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವಾಗಿದ್ದು, ಬಡವರಾದ ನಮಗೆ ತಾವು ನ್ಯಾಯ ಕೊಡಿಸಬೇಕೆಂದು ಅಪ್ರಾಪ್ತನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಘಟನೆ ಜೈಪುರದಲ್ಲಿ ನಡೆದಿದೆ.

ನನ್ನ ತಂಗಿಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿದ್ದು, ಆರೋಪಿಗಳು ಇನ್ನು ಸಹ ಬಂಧಿಸಲ್ಪಟ್ಟಿಲ್ಲ. ತನಗೆ ಸ್ಥಳೀಯ ಪೊಲೀಸರಿಂದ ನ್ಯಾಯ ಸಿಗದು ಹೀಗಾಗಿ ನೀವು ಅತ್ಯಾಚಾರ ಆರೋಪಿಗಳಿಗೆ ಶಿಕ್ಷೆ ವಿಧಿಸಿ, ಬಡವರಾದ ನಮೆಗೆ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದ್ದಾನೆ.

“ಅಂಕಲ್ ನನ್ನ ಪುಟ್ಟ ತಂಗಿಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ. ಆದರೆ ಬಲೋತ್ರಾ ಪೊಲೀಸರು ಆರೋಪಿಗಳಿಗೆ ರಕ್ಷಣೆಯನ್ನು ನೀಡುತ್ತಿದ್ದಾರೆ. ನಾವು ಬಡವರಾಗಿರುವುದರಿಂದ ನಮ್ಮ ನೋವಿನ ಕೂಗು ಯಾರಿಗೂ ಕೇಳುತ್ತಿಲ್ಲ. ನಾನು ಜಿಲ್ಲಾಡಳಿತದ ಅಧಿಕಾರಿಗಳನ್ನು ಸಹ ಭೇಟಿ ಮಾಡಿ ದೂರು ನೀಡಲು ಪ್ರಯತ್ನಿಸಿದೆ. ಆದರೆ ನನ್ನ ದೂರಿಗೆ ಗಮನವೇ ಕೊಡದ ಅವರು ನಾವು ಬಡವರೆಂದು ಹೀಯಾಳಿಸಿ ಕಳುಹಿಸಿದರು”.

ಒಂದು ಕಡೆ ನಿಮ್ಮ ಸರ್ಕಾರ ಬೇಟಿ ಬಚಾವೋ (ಹೆಣ್ಣುಮಕ್ಕಳನ್ನು ಉಳಿಸಿ) ಅಭಿಯಾನವನ್ನು ಕೈಗೊಳ್ಳುತ್ತಿದೆ. ಆದರೆ ರಾಜಸ್ಥಾನ್ ಸರ್ಕಾರ ನನ್ನ ತಂಗಿಯ ಮೇಲೆ ಅತ್ಯಾಚಾರ ವೆಸಗಿದವರನ್ನು ಬಂಧಿಸದೆ ಇಂತಹ ಅಭಿಯಾನಗಳ ಅಣಕವಾಡುತ್ತಿದೆ ಎಂದು ಅಪ್ರಾಪ್ತ ಬಾಲಕ ಪತ್ರದಲ್ಲಿ ಕಿಡಿಕಾರಿದ್ದಾನೆ.

Write A Comment