ಮನೋರಂಜನೆ

ಆ್ಯಂಡ್ರೆ ರಸೆಲ್ ರ ಅಮೋಘ ಬೌಲಿಂಗ್‌ ಗೆ ಮಣಿದ ಕಿಂಗ್ಸ್‌ ಇಲೆವೆನ್ ಪಂಜಾಬ್ ; ಕೋಲ್ಕತ್ತ ನೈಟ್ ರೈಡರ್ಸ್ ಗೆ ಏಳು ರನ್‌ಗಳ ಜಯ

Pinterest LinkedIn Tumblr

andre-russell-kkr

ಕೋಲ್ಕತ್ತ: ಬುಧವಾರ ರಾತ್ರಿ ವೇಗಿ ಆ್ಯಂಡ್ರೆ ರಸೆಲ್ ಅವರ ಅಮೋಘ ಬೌಲಿಂಗ್‌ ಮುಂದೆ ಕಿಂಗ್ಸ್‌ ಇಲೆವೆನ್ ಪಂಜಾಬ್ ತಂಡದ ಗೆಲುವಿನ ಆಸೆ ಕಮರಿತು. ಕೋಲ್ಕತ್ತ ನೈಟ್ ರೈಡರ್ಸ್ ಬಳಗವು ಏಳು ರನ್‌ಗಳಿಂದ ಜಯದ ಸಂಭ್ರಮ ಆಚರಿಸಿತು.

ಈಡನ್‌ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರೈಡರ್ಸ್ ತಂಡ ರಾಬಿನ್ ಉತ್ತಪ್ಪ (70; 49ಎ, 6ಬೌಂ, 2ಸಿ) ಮತ್ತು ಗೌತಮ್ ಗಂಭೀರ್ (54; 45ಎ, 6ಬೌಂ, 1ಸಿ) ನೀಡಿದ ಉತ್ತಮ ಆರಂ ಭದ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 164 ರನ್ ಗಳಿಸಿತು.

ಗುರಿ ಬೆನ್ನತ್ತಿದ ಕಿಂಗ್ಸ್‌ ಇಲೆವೆನ್ ತಂಡವು ಆರಂಭದಲ್ಲಿಯೇ ಮುಗ್ಗರಿ ಸಿತ್ತು. ನಂತರ ಗ್ಲೆನ್ ಮ್ಯಾಕ್ಸ್‌ವೆಲ್ (68 ರನ್) ಅವರ ಅರ್ಧಶತಕದಿಂದ ಚೇತರಿಸಿಕೊಂಡಿತು. ಆದರೆ, ವಿಂಡೀಸ್ ಆಟಗಾರ ಆ್ಯಂಡ್ರೆ ರಸೆಲ್ (20ಕ್ಕೆ4) ಅವರ ಮೊನಚಾದ ದಾಳಿಯ ಮುಂದೆ ಕುಸಿಯಿತು. ಈ ತಂಡ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗೆ 157ರನ್‌ ಗಳಿಸಲಷ್ಟೇ ಶಕ್ತವಾಯಿತು.

ಕೊನೆಯ ಓವರ್‌ನಲ್ಲಿ ಗೆಲುವಿಗಾಗಿ 12 ರನ್‌ಗಳನ್ನು ಹೊಡೆದು ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದ ಕಿಂಗ್ಸ್‌ ತಂಡಕ್ಕೆ ರಸೆಲ್ ಸಿಂಹಸ್ವಪ್ನವಾದರು.
ಕೊನೆಯ ಓವರ್‌ನಲ್ಲಿ ಮೂರು ವಿಕೆಟ್ ಪತನವಾದವು. ಅಕ್ಷರ್ ಪಟೇಲ್ ಅವರನ್ನು ರನ್‌ಔಟ್ ಮಾಡಿದ ರಸೆಲ್, ಸ್ವಪ್ನಿಲ್ ಸಿಂಗ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಗುರುಕೀರತ್ ಸಿಂಗ್ ಅವರನ್ನು ವಿಕೆಟ್‌ಕೀಪರ್ ರಾಬಿನ್ ಉತ್ತಪ್ಪ ರನ್‌ಔಟ್ ಮಾಡುವಲ್ಲಿ ಯಶಸ್ವಿಯಾದರು.

ತಮ್ಮ ಆರಂಭಿಕ ಸ್ಪೆಲ್‌ನಲ್ಲಿಯೇ ರಸೆಲ್ ಆರಂಭಿಕ ಬ್ಯಾಟ್ಸ್‌ಮನ್ ಮೊಯಿಸೆಸ್ ಸ್ಟಾಯಿನಿಸ್ ಮತ್ತು ಮನನ್ ವೊಹ್ರಾ ಅವರ ವಿಕೆಟ್ ಕಬಳಿಸಿದ್ದರು. ಎರಡನೇ ಸ್ಪೆಲ್‌ನ ಮೊದಲ ಓವರ್‌ನಲ್ಲಿ (18ನೇ ಓವರ್‌) ಡೇವಿಡ್ ಮಿಲ್ಲರ್ ಅವರಿಗೆ ಡಗ್‌ಔಟ್ ದಾರಿ ತೋರಿ ಸಿದ್ದರು.

ದಾಖಲೆಯ ಜೊತೆಯಾಟ: ಐಪಿಎಲ್ ಒಂಬತ್ತನೆ ಆವೃತ್ತಿಯಲ್ಲಿ ಮೊದಲ ವಿಕೆಟ್ ಜೊತೆಯಾಟದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ರಾಬಿನ್ ಮತ್ತು ಗೌತಮ್ ಮಾಡಿದರು.

13.3 ಓವರ್‌ಗಳಲ್ಲಿ ಇವರಿಬ್ಬರೂ ಮೊದಲ ವಿಕೆಟ್‌ಗೆ 101 ರನ್‌ ಸೇರಿಸಿ ದರು. ಸತತ ಸೋಲುಗಳಿಂದ ಕಂಗೆಟ್ಟಿ ರುವ ಪಂಜಾಬ್ ತಂಡದ ಬೌಲರ್‌ಗ ಳನ್ನು ಉತ್ತಪ್ಪ ಚೆನ್ನಾಗಿ ದಂಡಿಸಿದರು. ಇನ್ನೊಂದೆಡೆ ಗಂಭೀರ್ ಕೂಡ ಎದು ರಾಳಿ ತಂಡದ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದರು. ಗಂಭೀರ್ 42 ಎಸೆತ ಗಳಲ್ಲಿ ಮತ್ತು ಉತ್ತಪ್ಪ 38 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು. 13 ಓವರ್‌ಗಳಲ್ಲಿ ತಂಡದ ಖಾತೆಗೆ 100 ರನ್‌ಗಳು ಸೇರಿದವು.

ಗಂಭೀರ್ ಔಟಾದ ನಂತರ ಉತ್ತಪ್ಪ ಅಬ್ಬರ ಹೆಚ್ಚಾಯಿತು. ಅವರು ಯೂ ಸುಫ್ ಪಠಾಣ್ (19; 16ಎ, 1ಸಿ) ಜೊತೆ ಗೂಡಿ ಎರಡನೇ ವಿಕೆಟ್‌ಗೆ 36 ರನ್‌ ಸೇರಿಸಿ ತಂಡದ ಮೊತ್ತ ಹಿಗ್ಗಿಸಿದರು.

ಉತ್ತಪ್ಪ ರನ್‌ಔಟ್ ಆದ ನಂತರ ಆ್ಯಂಡ್ರೆ ರಸೆಲ್ ಮತ್ತು ಪಠಾಣ್ 27 ರನ್ ಗಳಿಸಿದರು. ಕೊನೆಯ ಐದು ಓವರ್‌ಗಳಲ್ಲಿ ಕೇವಲ 43 ರನ್‌ಗಳು ಮಾತ್ರ ಖಾತೆಗೆ ಸೇರಿದವು. ಕೊನೆಯ ಎಸೆತದಲ್ಲಿ ಆ್ಯಂಡ್ರೆ ರಸೆಲ್ ಕೂಡ ರನ್‌ಔಟ್ ಆದರು.

ಸ್ಕೋರ್‌ಕಾರ್ಡ್‌
ಕೋಲ್ಕತ್ತ ನೈಟ್‌ ರೈಡರ್ಸ್ 3 ಕ್ಕೆ 164 (20 ಓವರ್‌ಗಳಲ್ಲಿ)

ರಾಬಿನ್ ಉತ್ತಪ್ಪ ರನ್‌ಔಟ್ (ಶರ್ಮಾ) 70
ಗೌತಮ್ ಗಂಭೀರ್ ರನ್‌ಔಟ್ (ಮ್ಯಾಕ್ಸ್‌ವೆಲ್/ಸಂದೀಪ್ ಶರ್ಮಾ) 54
ಯೂಸುಫ್ ಪಠಾಣ್ ಔಟಾಗದೆ 19
ಆ್ಯಂಡ್ರೆ ರಸೆಲ್ ರನ್‌ಔಟ್ (ವೃದ್ಧಿಮಾನ್ ಸಹಾ/ಸಂದೀಪ್ ಶರ್ಮಾ) 16
ಇತರೆ: (ಲೆಗ್‌ಬೈ 2, ವೈಡ್ 3) 05
ವಿಕೆಟ್‌ ಪತನ: 1–101 (ಗಂಭೀರ್; 13.3), 2–137 (ಉತ್ತಪ್ಪ; 16.5),
3–164 (ರಸೆಲ್; 19.6).
ಬೌಲಿಂಗ್‌: ಸಂದೀಪ್ ಶರ್ಮಾ 4–0–25–0 (ವೈಡ್ 3), ಮೋಹಿತ್ ಶರ್ಮಾ 4–0–39–0, ಮೊಯಿಸೆಸ್ ಸ್ಟಾಯಿನಿಸ್ 3–0–26–0, ಅಕ್ಷರ್ ಪಟೇಲ್
4–0–24–0, ಸ್ವಪ್ನಿಲ್ ಸಿಂಗ್ 3–0–29–0, ಗುರುಕೀರತ್ ಸಿಂಗ್ 1–0–8–0, ಗ್ಲೆನ್ ಮ್ಯಾಕ್ಸ್‌ವೆಲ್ 1–0–11–0.
ಕಿಂಗ್ಸ್ ಇಲೆವೆನ್ ಪಂಜಾಬ್ 9 ಕ್ಕೆ 157 (20 ಓವರ್‌ಗಳಲ್ಲಿ)

ಮುರಳಿ ವಿಜಯ್ ಸಿ ಶಕೀಬ್ ಅಲ್ ಹಸನ್ ಬಿ ಮಾರ್ನೆ ಮಾರ್ಕೆಲ್ 06
ಮೊಯಿಸೆಸ್ ಸ್ಟಾಯಿನಿಸಿಸ್ ಸಿ ಪಿಯೂಷ್ ಚಾವ್ಲಾ ಬಿ ಆ್ಯಂಡ್ರೆ ರಸೆಲ್ 00
ಮನನ್ ವೊಹ್ರಾ ಸಿ ಶಕೀಬ್ ಅಲ್ ಹಸನ್ ಬಿ ಆ್ಯಂಡ್ರೆ ರಸೆಲ್ 00
ವೃದ್ಧಿಮಾನ್ ಸಹಾ ಬಿ ಪಿಯೂಷ್ ಚಾವ್ಲಾ 24
ಗ್ಲೆನ್ ಮ್ಯಾಕ್ಸ್‌ವೆಲ್ ಎಲ್‌ಬಿಡಬ್ಲ್ಯು ಬಿ ಪಿಯೂಷ್ ಚಾವ್ಲಾ 68
ಡೇವಿಡ್ ಮಿಲ್ಲರ್ ಸಿ ಆರ್. ಸತೀಶ್ (ಬದಲೀ ಫೀಲ್ಡರ್) ಬಿ ಆ್ಯಂಡ್ರೆ ರಸೆಲ್ 13
ಗುರುಕೀರತ್ ಸಿಂಗ್ ಮಾನ್‌ ರನ್‌ಔಟ್ (ಆರ್‌.ಸತೀಶ್/ಉತ್ತಪ್ಪ) 11
ಅಕ್ಷರ್ ಪಟೇಲ್ ರನ್‌ಔಟ್ (ರಸೆಲ್) 21
ಸ್ವಪ್ನಿಲ್ ಸಿಂಗ್ ಎಲ್‌ಬಿಡಬ್ಲ್ಯು ಬಿ ಆ್ಯಂಡ್ರೆ ರಸೆಲ್ 00
ಮೋಹಿತ್ ಶರ್ಮಾ ಔಟಾಗದೆ 01
ಇತರೆ:( ಬೈ 4, ಲೆಗ್‌ಬೈ 4, ವೈಡ್ 4 ) 12
ವಿಕೆಟ್‌ ಪತನ: 1–1 (ಸ್ಟಾಯಿನಿಸ್ 0.4), 2–13 (ವೊಹ್ರಾ; 2.6), 3–13 (ವಿಜಯ್: 3.1), 4–53 (ಸಹಾ; 8.6), 5–120 (ಮ್ಯಾಕ್ಸ್‌ವೆಲ್; 15.4),
6–130 (ಮಿಲ್ಲರ್; 17.3), 7–154 (ಪಟೇಲ್; 19.2),
8–155(ಗುರುಕೀರತ್; 19.3), 9–156 (ಸ್ವಪ್ನಿಲ್; 19.5)

ಬೌಲಿಂಗ್‌: ಆ್ಯಂಡ್ರೆ ರಸೆಲ್ 4–0–20–4 (ವೈಡ್ 1), ಮಾರ್ನೆ ಮಾರ್ಕೆಲ್
4–0–27–1 (ವೈಡ್ 1), ಉಮೇಶ್ ಯಾದವ್ 3–0–26–0 (ವೈಡ್ 1), ಶಕೀಬ್ ಅಲ್ ಹಸನ್ 3–0–21–0, ಪಿಯೂಷ್ ಚಾವ್ಲಾ 4–0–27–2 (ವೈಡ್ 1), ಬ್ರಾಡ್ ಹಾಗ್ 2–0–28–0
ಫಲಿತಾಂಶ: ಕೋಲ್ಕತ್ತ ನೈಟ್ ರೈಡರ್ಸ್‌ಗೆ 7 ರನ್‌ಗಳ ಜಯ.
ಪಂದ್ಯಶ್ರೇಷ್ಠ: ಆ್ಯಂಡ್ರೆ ರಸೆಲ್‌.

Write A Comment