ಕನ್ನಡ ವಾರ್ತೆಗಳು

ಸಿದ್ದಾಪುರ: ಬೈಕ್ ಹಾಗೂ ಲಾರಿ ನಡುವೆ ಅಪಘಾತ: ಬೈಕ್ ಸವಾರ ಸಾವು

Pinterest LinkedIn Tumblr

ಕುಂದಾಪುರ: ಸಿದ್ದಾಪುರದಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಲಾರಿಯು ಅಂಪಾರು ಕಡೆಯಿಂದ ಸಿದ್ದಾಪುರ ಕಡೆಗೆ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಕುಂದಾಪುರ ಶಿವಮೊಗ್ಗ ರಾಜ್ಯ ಹೆದ್ದಾರಿಯ ಸಿದ್ದಾಪುರ ಪೇಟೆ ಸಮೀಪ ನಡೆದಿದೆ.

ಸಿದ್ದಾಪುರದ ವ್ಯಾಪಾರಿ ಮೋಹನ್ ಶೆಟ್ಟಿ (48) ಅಪಘಾತದಲ್ಲಿ ಮೃತಪಟ್ಟವರು.

Siddapura_Accident_Mohana Shetty

ಸಿದ್ದಾಪುರದಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಲಾರಿಯು ವೇಗ ಹಾಗೂ ಅಜಾಗರೂಕತೆಯಿಂದ ಅಂಪಾರು ಕಡೆಯಿಂದ ಸಿದ್ದಾಪುರ ಕಡೆಗೆ ಬರುತ್ತಿದ್ದ ಬೈಕಿಗೆ ನೇರ ಡಿಕ್ಕಿ ಹೊಡೆದ ಪರಿಣಾಮ ಬಕ್ ಸವಾರ ಸಿದ್ದಾಪುರದ ವ್ಯಾಪಾರಿ ಮೋಹನ್ ಶೆಟ್ಟಿ ಅವರು ಸ್ಥಳದಲ್ಲಿಯೇ ಮೃತ ಪಟ್ಟರು. ಡಿಕ್ಕಿಯ ಪರಿಣಾಮ ಲಾರಿಯು ಬಕನ್ನು ಸುಮಾರು 19ಮಿ.ದೂರ ಎಳೆದುಕೊಂಡು ಹೋಗಿದೆ. ಇದರ ಪರಿಣಾಮ ಮೋಹನ್ ಶೆಟ್ಟಿ ದೇಹವು ಛಿದ್ರ ಛಿದ್ರಕೊಂಡಿತ್ತು.

ಮೋಹನ್ ಶೆಟ್ಟಿ ಅವರು ಸಿದ್ದಾಪುರದ ಕಡ್ರಿ ರಸ್ತೆಯಲ್ಲಿ ಸ್ವಾತಿ ಜನರಲ್ ಸ್ಟೋರ್ ನಡೆಸುತ್ತಿದ್ದು, ಸೌಮ್ಯ ಸ್ವಭಾವದರಾಗಿದ್ದರು. ಮೋಹನ್ ಶೆಟ್ಟಿ ಅವರ ಸಂಬಂಧಿಕರ ಮದುವೆಯನ್ನು ಮುಗಿಸಿಕೊಂಡು ಸಿದ್ದಾಪುರಕ್ಕೆ ಬರುವಾಗ ಈ ಘಟನೆ ನಡೆದಿದೆ.

ಮೃತರು ಪತ್ನಿ, ಇರ್ವ ಪುತ್ರಿಯರನ್ನು ಅಗಲಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ತನಿಖೆಕೈಗೊಂಡಿದ್ದಾರೆ.

Write A Comment