ರಾಷ್ಟ್ರೀಯ

ಪಠಾಣ್ ಕೋಟ್ ವಾಯುನೆಲೆ ಅತ್ಯಂತ ಅಸುರಕ್ಷಿತ: ಸಂಸದೀಯ ಸಮಿತಿ

Pinterest LinkedIn Tumblr

pathankot-terror-attackನವದೆಹಲಿ: ಭಾರತೀಯ ವಾಯುನೆಲೆ ಅತ್ಯಂತ ಸುರಕ್ಷಿತವಲ್ಲದ ತಾಣವಾಗಿದ್ದು, ಅಲ್ಲಿನ ಭದ್ರತೆಯನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರಗಾಮಿಗಳ ದಾಳಿ ಕುರಿತು ತನಿಖೆ ನಡೆಸುತ್ತಿರುವ ಸಂಸದೀಯ ಸಮಿತಿ ಹೇಳಿದೆ.
ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಪಿ. ಭಟ್ಟಾಚಾರ್ಯ ಅವರ ನೇತೃತ್ವದ ಗೃಹ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ, ಇಂದಿಗೂ ಕೂಡ ಪಠಾಣ್ ಕೋಟ್ ವಾಯುನೆಲೆಯ ಪರಿಸ್ಥಿತಿ ಸುರಕ್ಷಿತವಾಗಿಲ್ಲ. ಅಲ್ಲಿನ ಕುಂದುಕೊರತೆಗಳನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.
ಪಠಾಣ್ ಕೋಟ್ ನಲ್ಲಿರುವ ಭಾರತೀಯ ವಾಯುಪಡೆಯ ಅಧಿಕಾರಿಗಳೊಂದಿಗೆ ಸ್ಥಾಯಿ ಸಮಿತಿಯ ಸದಸ್ಯರು ಮಾತುಕತೆ ನಡೆಸಿದೆ. ಆದರೆ ಪಾಕಿಸ್ತಾನ ಮೂಲದ ಭಯೋತ್ಪಾದಕರು ಪಠಾಣ್ ಕೋಟ್ ವಾಯುನೆಲೆಗೆ ಹೇಗೆ ನುಸುಳಿ ಬಂದರು ಎಂದು ತಿಳಿದುಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಘಟನೆ ಹೇಗೆ ನಡೆಯಿತು? ಯೋಧರಿಗೆ ಮೊದಲೇ ಉಗ್ರಗಾಮಿಗಳ ಸಂಭಾವ್ಯ ದಾಳಿಯ ಎಚ್ಚರಿಕೆ ನೀಡಿದ್ದರೂ ಕೂಡ ಭದ್ರತೆಯನ್ನು ಮುರಿದು ಹೇಗೆ ಒಳನುಗ್ಗಿದರು ಎಂದು ತಿಳಿದುಕೊಳ್ಳುವುದು ಮುಖ್ಯವಾಗಿದೆ ಎಂದು ಭಟ್ಟಾಚಾರ್ಯ ಹೇಳಿದ್ದಾರೆ.
ಸಮಿತಿ ನೀಡುವ ವರದಿಯನ್ನು ಗಂಭೀರವಾಗಿ ಪರಿಗಣಿಸಿ ವಾಯುನೆಲೆ ಮತ್ತು ದೇಶದ ಭದ್ರತೆ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಾಮಾಣಿಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿ ಬಗ್ಗೆ ತನಿಖೆ ನಡೆಸಲು ನೇಮಿಸಿದ ಸಮಿತಿಯಲ್ಲಿ ಒಟ್ಟು 31 ಸದಸ್ಯರಿದ್ದು, ಅವರಲ್ಲಿ ಬಿಜೆಪಿಯ 13, ಕಾಂಗ್ರೆಸ್ ನ 4, ಬಿಜೆಡಿ 2, ತೃಣಮೂಲ ಕಾಂಗ್ರೆಸ್ ನ ಇಬ್ಬರು, ಎಡಿಎಂಕೆಯ ಮೂವರು, ಸಿಪಿಎಂ, ಸಿಪಿಐ, ಎಸ್ ಪಿ, ಟಿಆರ್ ಎಸ್, ಟಿಡಿಪಿ, ಶಿರೋಮಣಿ ಅಕಾಲಿದಳ ಮತ್ತು ಶಿವಸೇನೆಯ ಸದಸ್ಯರನ್ನು ಒಳಗೊಂಡಿದೆ.

Write A Comment