ರಾಷ್ಟ್ರೀಯ

ಸೆಲ್ಫಿ ಸಾವುಗಳಿಗೆ ಭಾರತ ತವರು

Pinterest LinkedIn Tumblr

selfiನವದೆಹಲಿ: ಸ್ಮಾರ್ಟ್ ಫೋನ್ ಗಳು ಬಂದ ನಂತರ ಸೆಲ್ಫಿ ಕ್ರೇಜ್ ಎಲ್ಲೆಡೆ ವ್ಯಾಪಿಸಿದ್ದು, ಸೆಲ್ಫಿ ಸಾವುಗಳಿಗೆ ಭಾರತ ತವರಾಗುತ್ತಿದೆ.
2014 ನಂತರ ವಿಶ್ವದಾದ್ಯಂತ 49 ಸೆಲ್ಫಿ ಕ್ರೇಜ್ ಸಾವುಗಳು ವರದಿಯಾಗಿದ್ದು, ಆ ಪೈಕಿ 19 ಸಾವುಗಳು ಭಾರತದಲ್ಲೇ ಆಗಿವೆ.
ಇತ್ತಿಚೆಗಷ್ಟೇ ಸೆಲ್ಫಿ ತೆಗೆದುಕೊಳ್ಳವ ವೇಳೆ ತನ್ನ ಮೇಲೆ ತಾನೇ ಗುಂಡು ಹಾರಿಸಿಕೊಂಡು ಅಪ್ರಾಪ್ತ ಬಾಲಕನೊಬ್ಬ ಮೃತಪಟ್ಟಿರುವುದು ವರದಿಯಾಗಿತ್ತು.
ರಾಮದೀಪ್ ಸಿಂಗ್(15) ಮೃತಪಟ್ಟ ದುರ್ದೈವಿ. ಬುಲೆಟ್ ಲೋಡೆಡ್ ಗನ್ ತೆಗೆದುಕೊಂಡು ಹಣೆಗೆ ಇಟ್ಟು ಸೆಲ್ಫಿ ತೆಗೆದುಕೊಳ್ಳುವ ವೇಳೆ ಆಕಸ್ಮಿಕವಾಗಿ ಟ್ರಿಗರನ್ನು ಒತ್ತಿದ ಪರಿಣಾಮ ಆತನ ಹಣೆಗೆ ಗುಂಡು ತಗುಲಿದೆ. ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ತಲೆಗೆ ತೀವ್ರವಾದ ಗಾಯವಾಗಿದ್ದರಿಂದ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿ ಭೂಷಣ್ ತಿಳಿಸಿದ್ದಾರೆ.
ರಾಮ್ ದೀಪ್ ಅವರ ತಂದೆ ಕಟ್ಟಡ ಗುತ್ತಿಗೆದಾರಾಗಿದ್ದರು. ಅವರು ಬಳಸುತ್ತಿದ್ದ ಗನ್ ತೆಗೆದುಕೊಂಡು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಗುಂಡೇಟಿಗೆ ಬಲಿಯಾಗಿದ್ದಾನೆ.

Write A Comment