ರಾಷ್ಟ್ರೀಯ

ಪಶ್ಚಿಮ ಬಂಗಾಳ: ಮೊದಲ ಬಾರಿಗೆ ಮತ ಚಲಾಯಿಸಲಿರುವ ಎನ್ ಕ್ಲೇವ್ ನಿವಾಸಿಗಳು

Pinterest LinkedIn Tumblr

enclave-votersಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಇದೇ 5ರಂದು ನಡೆಯಲಿರುವ 6ನೇ ಹಂತದ ಚುನಾವಣೆಯಲ್ಲಿ ಸ್ವಾತಂತ್ರ್ಯ ಸಿಕ್ಕಿದ ನಂತರ ಇದೇ ಮೊದಲ ಬಾರಿಗೆ ಕೂಚ್ ಬೆಹರ್ ಜಿಲ್ಲೆಯ ಸುಮಾರು 9 ಸಾವಿರ ಎನ್ ಕ್ಲೇವ್ ನಿವಾಸಿಗಳು ಮತ ಚಲಾಯಿಸಲಿದ್ದಾರೆ.
ಕೋಲ್ಕತ್ತಾದ ಕೂಚ್ ಬೆಹರ್ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಇರುವ 51 ಪರಾವೃತ ಪ್ರದೇಶದಲ್ಲಿ 14 ಸಾವಿರದ 864 ಜನರು ನೆಲೆಸಿದ್ದಾರೆ. ಅವರಲ್ಲಿ 9 ಸಾವಿರದ 540 ಅರ್ಹ ಮತದಾರರಿದ್ದಾರೆ ಎಂದು ಹೆಚ್ಚುವರಿ ಚುನಾವಣಾಧಿಕಾರಿ ದಿಬ್ಯೇಂದು ಸರ್ಕಾರ್ ತಿಳಿಸಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ ಕಳೆದ ವರ್ಷ ಭೂ ಪರಿದಿ ಒಪ್ಪಂದಕ್ಕೆ ಸಹಿ ಹಾಕಿದ್ದವು.ಈ ಒಪ್ಪಂದದಂತೆ ಬಾಂಗ್ಲಾದೇಶ ತನ್ನ ಬಳಿಯಿದ್ದ 51 ಆವೃತ ಪ್ರದೇಶವನ್ನು ಭಾರತಕ್ಕೆ ವರ್ಗಾಯಿಸಿದೆ. ಅದೇ ರೀತಿ ಭಾರತ 111 ಪರಾವೃತ ಪ್ರದೇಶಗಳನ್ನು ಬಾಂಗ್ಲಾಗೆ ಬಿಟ್ಟುಕೊಟ್ಟಿತ್ತು. ಬಾಂಗ್ಲಾದಿಂದ ಭಾರತಕ್ಕೆ ಸೇರಿದ ಪ್ರದೇಶಗಳ ಜನರು ಇದೀಗ ಮತ ಚಲಾವಣೆ ಹಕ್ಕು ಪಡೆದುಕೊಂಡಿದ್ದಾರೆ. ಇವರಿಗೆ ಮತದಾನದ ಬಗ್ಗೆ ಸಂಪೂರ್ಣ ಅರಿವು ನೀಡಲಾಗಿದೆ ಎಂದು ಸರ್ಕಾರ್ ತಿಳಿಸಿದ್ದಾರೆ.

Write A Comment