ಲಂಡನ್,ಮೇ3- ನಾನೊಬ್ಬ ಸುಸ್ತಿದಾರ, ಸಾಲ ಮಾಡಿ ಊರು ಬಿಟ್ಟುವ ಎಂದು ಆರೋಪಿಸುವ ಮೊದಲು ವಾಸ್ತವಾಂಶಗಳು ಏನು ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಮದ್ಯದ ದೊರೆ, ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ.
ಹೌದು, ನಾನು(ಕಿಂಗ್ ಫಿಷರ್ ಏರ್ಲೈನ್ಸ್) ಬ್ಯಾಂಕ್ಗಳಿಗೆ ಹಣ ಕೊಡಬೇಕಾಗಿರುವುದು ವಾಸ್ತವವೇ ಎಂದು ಒಪ್ಪಿಕೊಂಡಿರುವ ಮಲ್ಯ, ಆದರೆ ನಾನೇನೂ ಸಾಲ ಪಡೆದವನೂ ಅಲ್ಲ, ಸಾಲಗಾರ ಎಂದು ತೀರ್ಪು ಬಂದಿಲ್ಲ ಎಂದು ಹೇಳಿದ್ದಾರೆ. ತಾನು ಪಡೆದಿರುವ ಎಲ್ಲ ಸಾಲದ ಮೊತ್ತವನ್ನೂ ಮರುಪಾವತಿ ಮಾಡಲು ನಾನು ಬದ್ಧವಾಗಿದ್ದರೂ ಕೇವಲ ಕಾಲಾವಕಾಶ ಕೇಳದ ನನ್ನನ್ನು ಸುಪ್ತಿದಾರ, ದೇಶಭ್ರಷ್ಟ ಎಂದೆಲ್ಲ ಹೇಳಲಾಗುತ್ತಿದೆ.
ಆದರೆ ಅದಕ್ಕೆ ಮುನ್ನ ಪರಿಸ್ಥಿತಿ ಮತ್ತು ವಾಸ್ತವಗಳನ್ನು ಪರಿಶೀಲಿಸಬೇಕು ಎಂದು ಮಲ್ಯ ಹೇಳಿದ್ದಾರೆ. ಸದ್ಯ ಲಂಡನ್ನ ತಮ್ಮ ಸ್ವಂತ ನಿವಾಸದಲ್ಲಿರುವ ಮಲ್ಯ ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರನ್ನು ರಾಜಸಭಾ ಸದಸ್ಯತ್ವದಿಂದ ಉಚ್ಚಾಟಿಸುವ ಪ್ರಕ್ರಿಯೆ ನಡೆದಿತ್ತು.