ಅಂತರಾಷ್ಟ್ರೀಯ

ಇಸ್ಲಾಮಿಕ್ ಸ್ಟೇಟ್‌ನ ಹೊಸ ಕಮಾಂಡರ್ ಭಾರತೀಯ ಮೂಲದ ಸಿದ್ಧಾರ್ಥ್ ಧಾರ್!

Pinterest LinkedIn Tumblr

siddhartha-dhar-abu

ಲಂಡನ್: ಹೊಸ ಜಿಹಾದಿ ಜಾನ್ ಎಂದೇ ಖ್ಯಾತನಾಗಿರುವ ಭಾರತೀಯ ಮೂಲದ ಉಗ್ರ ಬ್ರಿಟನ್‌ನ ಸಿದ್ಧಾರ್ಥ್ ಧಾರ್ ಇದೀಗ ಇಸ್ಲಾಮಿಕ್ ಸ್ಟೇಟ್‌ನ ಹಿರಿಯ ಕಮಾಂಡರ್ ಎಂದು ಮಾಧ್ಯಮಗಳು ವರದಿ ಮಾಡಿವೆ.

ಐಎಸ್ ಮುಷ್ಠಿಯಿಂದ ತಪ್ಪಿಸಿಕೊಂಡು ಬಂದ ನಿಹಾದ್ ಬರಾಕತ್ ಎಂಬ ಯಾಜಿದಿ ಬಾಲಕಿ ತನನ್ನು ಮೋಸುಲ್‌ನಲ್ಲಿರುವ ಸಿದ್ಧಾರ್ಥ್ ತನ್ನನ್ನು ಅಪಹರಿಸಿದ್ದಾಗಿ ವಾಹಿನಿಯೊಂದಕ್ಕೆ ತಿಳಿಸಿದ್ದಾಳೆ.

ಬ್ರಿಟಿಷ್ ಹಿಂದೂ ಆಗಿದ್ದ ಸಿದ್ದಾರ್ಥ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಬಳಿಕ ಅಬು ರುಮಾಯ್‌ಸಾಹ್ ಎಂದು ಹೆಸರು ಬದಲಿಸಿಕೊಂಡಿದ್ದನು. 2014ರಲ್ಲಿ ಈತ ಬ್ರಿಟನ್‌ನಿಂದ ಕಣ್ಣು ತಪ್ಪಿಸಿ , ಹೆಂಡತಿ ಮಕ್ಕಳೊಂದಿಗೆ ಸಿರಿಯಾದಲ್ಲಿ ನೆಲೆಯೂರಿದ್ದನು.

ಬ್ರಿಟಿಷ್ ಮುಸ್ಲಿಂ ಟೀವಿ ವಾಹಿನಿಯೊಂದರಲ್ಲಿ ಸಂದರ್ಶನ ನೀಡಿದ ಬರಾಕಾತ್, ತನ್ನನ್ನು ಅಪಹರಿಸಿದವರ ಉಗ್ರರಲ್ಲಿ ಸಿದ್ಧಾರ್ಥ್ ಕೂಡಾ ಇದ್ದ ಎಂದಿದ್ದಾರೆ.

ನನ್ನನ್ನು ಕಿರ್ಕಕ್ ಬಳಿ ಅಪಹರಿಸಿದ ಉಗ್ರರು, ಆಮೇಲೆ ಮೋಸುಲ್‌ಗೆ ಕರೆದೊಯ್ದರು. ಅಲ್ಲಿದ್ದ ಅಬು ಧಾರ್ ಎಂಬಾತ ಯಾಜಿದಿ ಹುಡುಗಿಯರನ್ನು ಗುಲಾಮರನ್ನಾಗಿ ಇಟ್ಟುಕೊಂಡಿದ್ದ ಎಂದು ಬರಾಕಾತ್ ಹೇಳಿದ್ದಾಳೆ. ಧಾರ್ ಅವರ ಫೋಟೋ ತೋರಿಸಿದಾಗ ಬಾಲಕಿ ಆತನ ಗುರುತು ಹಿಡಿದಿದ್ದಾಳೆ. ಆದರೆ ಆ ಬಾಲಕಿ ಹೇಳುತ್ತಿರುವ ವ್ಯಕ್ತಿಯೇ ಧಾರ್ ಎಂಬುದಕ್ಕೆ ಸಾಕ್ಷ್ಯಗಳೇನೂ ಇಲ್ಲ ಎಂದು ಪತ್ರಿಕೆ ವರದಿಯಲ್ಲಿ ಹೇಳಲಾಗಿದೆ.

ಐಎಸ್ ಕೇಂದ್ರವಾದ ಮೋಸುಲ್ ಸಿದ್ಧಾರ್ಥ್‌ನ ತಾಣವಾಗಿದೆ ಎಂದು ದಿ ಇಂಡಿಪೆಂಡೆಂಟ್ ಪತ್ರಿಕೆ ವರದಿ ಮಾಡಿದೆ. ಐಎಸ್‌ಗೆ ಸೇರಿದ ಸಿದ್ಧಾರ್ಥ್ ಧಾರ್ ನ ಹೆಸರು ಅಬು ರುಮಾಯ್‌ಸಾಹ್ ಎಂದಾಗಿದೆ. ಬ್ರಿಟನ್‌ನಲ್ಲಿದ್ದಾಗ 6 ಬಾರಿ ಬಂಧಿತನಾಗಿದ್ದ ಈತ ಜಾಮೀನು ಪಡೆದು ಹೊರ ಬಂದಾಗ ಲಂಡನ್ ನಿಂದ ಪ್ಯಾರಿಸ್ ಮೂಲಕ ಸಿರಿಯಾಗೆ ಹಾರಿದ್ದ.

ಜಿಹಾದಿ ಜಾನ್ ಎಂದು ಕರೆಯಲ್ಪಟ್ಟಿದ್ದ ಮುಹಮ್ಮದ್ ಹಂವಾಸಿ ಅಮೆರಿಕದ ವಾಯುದಾಳಿಯಲ್ಲಿ ಸಾವಿಗೀಡಾದ ನಂತರ ಆತನ ಸ್ಥಾನಕ್ಕೆ ಬಂದವನು ಧಾರ್. ಮುಖವಾಡ ಧರಿಸಿ ಬಂಧಿತರನ್ನು ಕ್ಯಾಮೆರಾ ಮುಂದೆಯೇ ಕತ್ತು ಸೀಳಿ ಹತ್ಯೆಗೈಯ್ಯುವವ ವ್ಯಕ್ತಿ ಇದೇ ಧಾರ್!

Write A Comment